Urdu   /   English   /   Nawayathi

ಉತ್ತರ ಪ್ರದೇಶದ ಚಂಡೌಲಿಯಲ್ಲಿ ಗೂಡ್ಸ್​ ರೈಲು ಹರಿದು ನಾಲ್ವರು ಸಾವು

share with us

ಚಂಡೌಲಿ: 27 ಮೇ 2020 (ಫಿಕ್ರೋಖಬರ್ ಸುದ್ದಿ) ಉತ್ತರ ಪ್ರದೇಶದ ಚಂಡೌಲಿಯಲ್ಲಿ ಗೂಡ್ಸ್​ ರೈಲಿಗೆ ಸಿಕ್ಕಿ ನಾಲ್ವರು ಸಾವನ್ನಪ್ಪಿದ್ದಾರೆ. ಡಿಡಿಯು ಜಂಕ್ಷನ್‌ನಿಂದ ಚಂಡೌಲಿಗೆ ರೈಲು ಹೋಗುತ್ತಿದ್ದಾಗ, ಸದರ್ ಕೊಟ್ವಾಲಿ ಪ್ರದೇಶದ ಹಿನೌಟಾ ಗ್ರಾಮದ ಬಳಿಯ ಡೌನ್ ಲೈನ್‌ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ ರೈಲಿನ ಲೋಕೋ ಪೈಲಟ್​ ರೈಲ್ವೆ ರಕ್ಷಣಾ ದಳ (ಆರ್​ಪಿಎಫ್​) ದ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕೊಟ್ವಾಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا