Urdu   /   English   /   Nawayathi

ಕೊರೋನಾ ವೈರಸ್: ರಾಯಬಾಗದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಕಿಡಿಗೇಡಿಗಳ ಹಲ್ಲೆ

share with us

ರಾಯಬಾಗ: 07 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಬೆಂಗಳೂರು ಧಾರವಾಡ ಆದ ನಂತರ ಈಗ ರಾಯಬಾಗ ತಾಲೂಕಿನ‌ ಕುಡಚಿ ಪಟ್ಟಣದಲ್ಲಿ ಆಶಾ‌ ಕಾರ್ಯಕರ್ತೆಯರ ಮೇಲೆ ಕಿಡಿಗೇಡಿಗಳು ಹಲ್ಲೆ‌ ಮಾಡುವುದರ ಜೊತೆಗೆ ದಾಖಲಾತಿಗಳನ್ನು ಹರಿದು ಹಾಕಿ ಪುಂಡತನ ಮೆರೆದಿದ್ದಾರೆ. ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೋನಾ ವೈರಸ್ 4 ಪ್ರಕರಣಗಳು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೊದಲ ಹಂತ ಅಂದರೆ ಪ್ರಾಥಮಿವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದ 40 ಜನರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಇನ್ನೂ ಎರಡನೇ ಹಂತದಲ್ಲಿ ಇರುವ ಜನರನ್ನು ಪತ್ತೆ ಹಚ್ಚಲು ಹಾಗೂ ಆರೋಗ್ಯ ವಿಚಾರದಲ್ಲಿ ಸಮೀಕ್ಷೆ ಕಾರ್ಯ ನಡೆಸಲು ಆಶಾ ಕಾರ್ಯಕರ್ತರು ಮುಂದಾಗುತ್ತಾರೆ. ಆ ಸಂದರ್ಭದಲ್ಲಿ ಮೂವರು ಆಶಾ ಕಾರ್ಯಕರ್ತರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸುವುದರ ಜೊತೆಗೆ ತಳ್ಳಾಟ ನಡೆಸಿ ಇದ್ದ ದಾಖಲಾತಿಯನ್ನು ಹರಿದು ಗಟಾರ್ ನಲ್ಲಿ ಚೆಲ್ಲಿದ್ದಾರೆ. ಅಲ್ಲದೇ ಅವರ ಮೊಬೈಲ್ಗಳು ಸದ್ಯಕ್ಕೆ ನಾಪತೆಯಾಗಿವೆ. ಇದರಿಂದ ಆತಂಕಗೊಂಡ ಮೂರು ಆಶಾ ಕಾರ್ಯಕರ್ತೆಯರು ತಕ್ಷಣ ಕುಡಚಿ ಪೊಲೀಸ್ ಠಾಣೆಯಲ್ಲಿ ಬಂದು ಕುಳಿತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ರಾಯಬಾಗ ತಹಸೀಲ್ದಾರ ಚಂದ್ರಕಾಂತ ಭಜಂತ್ರಿ, ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರನ್ನು ವಿಚಾರಿಸಿದದ್ದಾರೆ. ವಿಚಾರಿಸಿದ ನಂತರ ಕಾರ್ಯಕರ್ತೆಯರ ಹೇಳಿಕೆ ತೆಗೆದುಕೊಂಡು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಡಿವೈಎಸ್ಪಿ ಅವರು ತನಿಖೆ‌ಕೈಗೊಂಡಿದ್ದಾರೆ. ಇನ್ನೂ ಇದೇ ವಿಷಯವಾಗಿ ರಾಯಬಾಗ ತಹಸೀಲ್ದಾರ ಚಂದ್ರಕಾಂತ ಭಜಂತ್ರಿ ಮುಸ್ಲೀಂ ಸಮುದಾಯದ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಕುಟುಂಬ ಬಿಟ್ಟು ನಿಮ್ಮ ಆರೋಗ್ಯ ವಿಚಾರಿಸುವುದಕ್ಕೆ ಬಂದರೆ ಅವರ ಮೇಲೆ ಹಲ್ಲೆ ಮಾಡಿರುವುದು ತೀವ್ರ ಖಂಡನೀಯ. ನಾವೇನು ನಿಮ್ಮನ್ನು ಹೊಡೆಯುವವರಿದ್ದೇವಾ? ಏನ್ ಟರ್ಚರ್ ಮಾಡಲಿದ್ದೇವಾ.? ನಿಮ್ಮ ಆರೋಗ್ಯ ಸೇವೆ ಮಾಡಲು ಬಂದಿದ್ದವರಿಗೆ ಇಂತಹದ್ದನ್ನು ಮಾಡಿರುವುದು ಸರಿಯಲ್ಲ. ಸಲಹೆ ನೀಡಿದರು. ಇದೇ ವಿಷಯವಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಅಸ್ ಶೆಟ್ಟರ್ ಅವರನ್ನು ಚಿಕ್ಕೋಡಿಯಲ್ಲಿ ಮಾತನಾಡಿಸಿದಾಗ, ಯಾರೇ ಆಗಿರಲಿ ಆರೋಗ್ಯ ಸರ್ವೆ ಕಾರ್ಯ ಮಾಡುತ್ಯಿರುವ ಕಾರ್ಯಕರ್ತೆಯರ ಮೇಲೆ ಹಲ್ಲೆ‌ಮಾಡಿದ್ದು ಖಂಡನೀಯ. ಅವರನ್ನು ಪತ್ತೆ ಹಚ್ಚಿ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ದಿನದಿಂದ ದಿನಕ್ಕೆ ಆಶಾ ಕಾರ್ಯಕರ್ತೆಯರ‌ ಮೇಲೆ ಹಲ್ಲೆ‌ ನಡೆಯುತ್ತಿರುವುದು ತೀವ್ರ ಚರ್ಚೆಗ್ರಾಸವಾಗಿದೆ. ನಿಮ್ಮ ಆರೋಗ್ಯ ಕಾಪಾಡಲು ಎಂದು ಹೇಳುವವರಿಗೆ ಹಲ್ಲೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا