Urdu   /   English   /   Nawayathi

ಅಕ್ರಮವಾಗಿ ಶೇಂದಿ ಸಾಗಿಸುತ್ತಿದ್ದ ಇಬ್ಬರ ಬಂಧನ

share with us

ಬೆಳ್ತಂಗಡಿ: 05 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಅಕ್ರಮವಾಗಿ ಶೇಂದಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ವಲಯದ ಅಬಕಾರಿ ಪೊಲೀಸರು ಗಸ್ತು ತಿರುಗುವ ವೇಳೆ ಆರೋಪಿಗಳಾದ ತಂಬಿ ಕೆ.ವಿ. ಹಾಗೂ ಶಿವಣ್ಣ ಗೌಡ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ 35 ಲೀಟರ್​ ಸಾಮರ್ಥ್ಯದ ಮೂರು ಪ್ಲಾಸ್ಟಿಕ್ ಕ್ಯಾನ್​​​ಗಳಲ್ಲಿನ 90 ಲೀಟರ್​​ ಶೇಂದಿ ಹಾಗೂ ಸಾಗಾಟಕ್ಕೆ ಬಳಸಿದ ಮಾರುತಿ ಓಮ್ನಿ ಕಾರು ಸೇರಿದಂತೆ ಒಟ್ಟು 1,17,736 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا