Urdu   /   English   /   Nawayathi

ಕೊರೋನಾ ವೈರಸ್: ವೈದ್ಯರು, ಪೊಲೀಸರ ಒಂದು ದಿನದ ವೇತನ ಕಡಿತ, ಪರಿಹಾರ ನಿಧಿಗೆ ಜಮೆ!

share with us

ಬೆಂಗಳೂರು: 01 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಕೊರೋನಾ ವೈರಸ್ ಮಹಾಮಾರಿ ನಿರ್ವಹಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವೈದ್ಯರು, ಪೊಲೀಸರ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಈ ಕುರಿತಂತೆ ಕರ್ನಾಟಕ ಸರ್ಕಾರ ಅದೇಶ ಹೊರಡಿಸಿದ್ದು, ರಾಜ್ಯದ ವೈದ್ಯರು ಮತ್ತು ಪೊಲೀಸರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್ 19 ಖಾತೆಗೆ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ಒಂದು ವೇಳೆ ಪರಿಹಾರ ನಿಧಿಗೆ ಹಣ ನೀಡಲು  ಇಚ್ಛಿಸದವರು ಮಾರ್ಚ್ 4ರೊಳಗೆ ತಮ್ಮ ಇಲಾಖಾ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ನಿಗದಿತ ದಿನಾಂಕದೊಳಗೆ ಯಾವುದೇ ಮಾಹಿತಿ ಲಭ್ಯವಾಗದಿದ್ದರೆ ಆಗ ಸಿಬ್ಬಂದಿಗಳು ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಲು ಸಮ್ಮತಿಸಿದ್ದಾರೆ ಎಂದು ಅವರ  ವೇತನದಿಂದ ಒಂದು ದಿನದ ಸಂಬಳವನ್ನು ಕಡಿತ ಮಾಡಲಾಗುತ್ತದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.

ಸರ್ಕಾರದ ನಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಇನ್ನು ರಾಜ್ಯದಲ್ಲಿ ಕೊರೋನಾ ವೈರಸ್ ಹರಡದಂತೆ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ಪೊಲೀಸರು ಮತ್ತು ವೈದ್ಯರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಬದಲಿಗೆ ರಾಜ್ಯ ಸರ್ಕಾರ ಇರುವ ವೇತನವನ್ನೇ ಕಡಿತ ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ  ವ್ಯಕ್ತಪಡಿಸುತ್ತಿದ್ದಾರೆ,. ರಾಜ್ಯದಲ್ಲಿ ಲಾಕ್ ಡೌನ್ ಹೇರಿದ ದಿನದಿಂದಲೂ ರಾಜ್ಯಾದ್ಯಂತ ಲಕ್ಷಾಂತರ ಪೊಲೀಸರು ಹಗಲು ರಾತ್ರಿ ಎನ್ನದೇ ಕರ್ತವ್ಯದಲ್ಲಿ ತೊಡಗಿದ್ದಾರೆ. ಅಂತೆಯೇ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳೂ ಕೂಡ ತಮ್ಮ ಜೀವದ ಹಂಗು ತೊರೆದು ಕೊರೋನಾ ವೈರಸ್  ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

Chetana Belagere@chetanabelagere

Why cut doctor’s and policemen’s day salary @BSYBJP? Aren’t they supposed to be given extra salary for the service they are doing at this time of crisis? @XpressBengaluru @santwana99 @DOHgovph @DHFWKA @DgpKarnataka @BSBommai @BlrCityPolice @NammaBengaluroo

View image on TwitterView image on TwitterView image on TwitterView image on Twitter

85

9:40 PM - Apr 1, 2020

Twitter Ads info and privacy

49 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا