Urdu   /   English   /   Nawayathi

ತೀವ್ರ ಕಟ್ಟೆಚ್ಚರದಲ್ಲಿ ಕಾಸರಗೋಡು ಜಿಲ್ಲೆ:38ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ

share with us

ಕಾಸರಗೋಡು: 24 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ದುಬೈಯಿಂದ ಬಂದ 19 ಜನರಿಗೆ ಕೊರೋನಾ ವೈರಸ್ ಸೋಂಕು ದೃಢವಾಗಿದ್ದು ಸಮುದಾಯಗಳಲ್ಲಿ ಬಹಳ ಬೇಗನೆ ಹರಡಬಹುದು ಎಂಬ ಭೀತಿಯಿಂದ ಜಿಲ್ಲಾಡಳಿತ ಸೋಂಕಿತರ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಯಿರುವುದರಿಂದ ಆಸ್ಪತ್ರೆಗಳಲ್ಲಿ ವಾರ್ಡ್ ಗಳ ಸಂಖ್ಯೆಯನ್ನು, ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವತ್ತ ಗಮನ ಹರಿಸಿದೆ. ಸದ್ಯ ಜಿಲ್ಲಾಡಳಿತ ಕೊರೋನಾ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ಗಳನ್ನು ವ್ಯವಸ್ಥೆ ಮಾಡುವತ್ತ ಗಮನ ಹರಿಸಿದೆ. ನಿನ್ನೆ ಕಾಸರಗೋಡಿನ ಜನರಲ್ ಹಾಸ್ಪಿಟಲ್ ನ ಮೂರು ಮತ್ತು ನಾಲ್ಕನೇ ಮಹಡಿಯನ್ನು ಕೊರೋನಾ ಸೋಂಕಿತರ ಚಿಕಿತ್ಸಾ ವಾರ್ಡ್ ಎಂದು ಬದಲಾಯಿಸಲಾಗಿದೆ ಎಂದು ಜಿಲ್ಲಾ ವಿಚಕ್ಷಣಾಧಿಕಾರಿ ಡಾ ಎ ಟಿ ಮನೋಜ್ ತಿಳಿಸಿದ್ದಾರೆ. ಕಳೆದ ವಾರ, ಕಾಙಂಗಾಡ್ ನ ಜಿಲ್ಲಾಸ್ಪತ್ರೆ ಮತ್ತು ಕಾಸರಗೋಡಿನ ಜನರಲ್ ಹಾಸ್ಪಿಟಲ್ ಗಳನ್ನು 30 ಕೊಠಡಿಗಳ ಪ್ರತ್ಯೇಕ ವಾರ್ಡ್ ಗಳಾಗಿ ಬದಲಾಯಿಸಲಾಗಿತ್ತು. ಇಂದು ಕೊರೋನಾ ರೋಗಿಗಳಿಗೆ ಜಿಲ್ಲೆಯ 11 ಕಡೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳಿದ್ದು ಅವುಗಳಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಸೇರಿವೆ ಎಂದು ಡಿಎಂಒ ಡಾ ಎ ವಿ ರಾಮ್ ದಾಸ್ ತಿಳಿಸಿದ್ದಾರೆ. ಸದ್ಯ ಕಾಸರಗೋಡು ಜಿಲ್ಲೆಯ 38 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಇವರಲ್ಲಿ 37 ಮಂದಿ ದುಬೈಯಿಂದ ಮತ್ತು ಒಬ್ಬರು ಶಾರ್ಜಾದಿಂದ ಬಂದವರಾಗಿದ್ದಾರೆ. 

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا