Urdu   /   English   /   Nawayathi

ರಾಷ್ಟ್ರ ರಾಜಧಾನಿಯಲ್ಲಿ ಜನ ಸಂಚಾರ ವಿರಳ: ಜಮ್ಮುಕಾಶ್ಮೀರದ ರಸ್ತೆಗಳು ಖಾಲಿ ಖಾಲಿ

share with us

ನವದೆಹಲಿ: 22 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ವೈರಸ್ ಹರಡುವುದನ್ನು ನಿಯಂತ್ರಿಸುವ ಕ್ರಮವಾಗಿ ಅನಿವಾರ್ಯವಲ್ಲದ ಎಲ್ಲಾ ಪ್ರಯಾಣಕ್ಕೆ ಕಡಿವಾಣ ಹಾಕುವಂತೆ ಸರ್ಕಾರ ಮನವಿ ಮಾಡಿತ್ತು.

ಈ ಮನವಿಗೆ ಸಾರ್ವಜನಿಕರು ಬೆಂಬಲ ಸೂಚಿಸಿದ್ದಾರೆ. ಇದರ ಫಲವಾಗಿ ದೆಹಲಿಯ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರ ವಿರಳವಾಗಿದೆ. ಜಮ್ಮುಕಾಶ್ಮೀರದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಮಾರುಕಟ್ಟೆಗಳನ್ನು ಮುಚ್ಚಿಸಲಾಗಿದೆ. ನಗರದ ಬಹುತೇಕ ಅಂಗಡಿಗಳು ಬಂದ್ ಆಗಿದ್ದು, ಸಾರ್ವಜನಿಕರ ಸಂಚಾರ ಕೂಡ ವಿರಳವಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ನವದೆಹಲಿಯಲ್ಲಿ 25, ಜಮ್ಮು ಕಾಶ್ಮೀರದ 4 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا