Urdu   /   English   /   Nawayathi

ಚೀನಾದ ಅಧ್ಯಕ್ಷ, ಚೀನಾ ರಾಯಭಾರಿ ವಿರುದ್ಧ ದೂರು ದಾಖಲು... ಯಾಕೆ ಗೊತ್ತೇ

share with us

ಬಿಹಾರ: 16 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ವೈರಸ್​​ ಹರಡಲು ಪಿತೂರಿ ನಡೆಸಿದ ಆರೋಪದಡಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಚೀನಾ ರಾಯಭಾರಿ ಸನ್​​​ ವಿಯ್​ಡೋಂಗ್​ ವಿರುದ್ಧ ಬಿಹಾರದ ಮುಜಾಫರ್​​​ಪುರ ಕೋರ್ಟ್​​​ನಲ್ಲಿ ದೂರು ದಾಖಲಾಗಿದೆ. ಏಪ್ರಿಲ್ 11 ರಂದು ಸಿಜೆಎಂ ನ್ಯಾಯಾಲಯದಲ್ಲಿ ಈ ಕೇಸ್​ ವಿಚಾರಣೆಗೆ ನಡೆಯಲಿದೆ. ವಕೀಲರಾದ ಸುಧೀರ್​​ ಕುಮಾರ್​​ ಓಜಾ ಈ ಇಬ್ಬರ ಬಗ್ಗೆ ದೂರು ದಾಖಲಿಸಿದ್ದು , ದೂರಿನಲ್ಲಿ ಚೀನಾ ಅಧ್ಯಕ್ಷ ಹಾಗೂ ಭಾರತದ ಚೀನಾ ರಾಯಭಾರಿ ಕೊರೊನಾ ವೈರಸ್ ಹರಡುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಭಾರತದಲ್ಲಿ 17 ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 110 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ನಂತರ ಈ ದೂರು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا