Urdu   /   English   /   Nawayathi

ಚೀನಾಕ್ಕೆ ಕೊರೊನಾ ತಂದಿದ್ದು ಅಮೆರಿಕ ಸೇನೆ ಹೇಳಿಕೆ... ಚೀನಾ ಅಧಿಕಾರಿಗೆ ಯುಎಸ್​​ನಿಂದ ಸಮನ್ಸ್​

share with us

ವಾಷಿಂಗ್ಟನ್​: 15 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿ, ಈಗಾಗಲೇ ಸಾವಿರಾರು ಜನರ ಪ್ರಾಣ ಬಲಿ ಪಡೆದಿರುವ ಮಹಾಮಾರಿ ಕೊರೊನಾ ಮೊದಲು ಹುಟ್ಟಿಕೊಂಡಿದ್ದು, ಚೀನಾದಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ. ಇದರ ಮಧ್ಯೆ ಚೀನಾಕ್ಕೆ ಕೊರೊನಾ ವೈರಸ್​​ ತಂದಿದ್ದು, ಅಮೆರಿಕ​ ಸೇನೆ ಎಂದು ಚೀನಾ ಅಧಿಕಾರಿ ಹೇಳಿಕೆ ನೀಡಿದ್ದು, ಇದೀಗ ಅವರಿಗೆ ಸಮನ್ಸ್​ ಜಾರಿಯಾಗಿದೆ. ಯುನೈಟೆಡ್​​ ಸ್ಟೇಟ್ಸ್​​ ಇದೀಗ ಈ ರೀತಿಯ ವಿವಾದಿತ ಹೇಳಿಕೆ ನೀಡಿರುವ ಚೀನಾ ರಾಯಭಾರಿ ಅಧಿಕಾರಿಗೆ ಸಮನ್ಸ್​ ಜಾರಿ ಮಾಡಿದೆ. ಹೀಗಾಗಿ ಉಭಯ ದೇಶಗಳ ನಡುವಿನ ವಾಕ್ಸಮರ ಇದೀಗ ಮತ್ತಷ್ಟು ತಾರಕ್ಕೇರಿದೆ. ಕಳೆದೆರಡು ದಿನಗಳ ಹಿಂದೆ ಚೀನಾದ ವಕ್ತಾರ ಝಹಾವೋ ಲಿಜಿಯಾನ್, ಅಮೆರಿಕ ಸೇನೆ ಬಹುಶಃ ಕೋವಿಡ್​-19 ವೈರಸ್​ ವುಹಾನ್​ಗೆ ತಂದಿರಬಹುದು ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ಇದೀಗ ಪ್ರತಿರೋಧ ವ್ಯಕ್ತಪಡಿಸಿರುವ ಅಮೆರಿಕ ಸಮನ್ಸ್​ ಜಾರಿ ಮಾಡಿ ಉತ್ತರ ನೀಡುವಂತೆ ತಿಳಿಸಿದೆ. ಚೀನಾದಲ್ಲಿ ಹುಟ್ಟಿಕೊಂಡಿರುವ ಮಹಾಮಾರಿ ಕೊರೊನಾ ಈಗಾಗಲೇ ಅನೇಕ ದೇಶಗಳಿಗೆ ಲಗ್ಗೆಯಿಟ್ಟಿದ್ದು, ಭಾರತದಲ್ಲೂ ಇಬ್ಬರ ಬಲಿ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ರೀತಿಯಲ್ಲಿ ಇದು ಹರಡದಂತೆ ನಿಗಾ ವಹಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا