Urdu   /   English   /   Nawayathi

ಆಂಧ್ರದಿಂದ ಗಡಿಪಾರಾಗಿದ್ದ ರೌಡಿಶೀಟರ್​ ಬರ್ಬರ ಕೊಲೆ... ಯಲ್ಲಪ್ಪ ಮೇಲಿದ್ದವು ಹತ್ತಾರು ಕೇಸ್

share with us

ಬಳ್ಳಾರಿ: 27 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಇಲ್ಲಿನ ದೇವಿನಗರದ ಕಿರಾಣಿ ಅಂಗಡಿ ಮುಂದೆ ಕುರ್ಚಿ ಹಾಕಿಕೊಂಡು ಕುಳಿತಿದ್ದ ರೌಡಿಶೀಟರ್ ಯಲ್ಲಪ್ಪನ ತಲೆಯ ಭಾಗಕ್ಕೆ ಆಟೋರಿಕ್ಷಾದಲ್ಲಿ ಬಂದಿಳಿದ ದುಷ್ಕರ್ಮಿಗಳು ತಮ್ಮ ಕೈಯಲ್ಲಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರಕರಣದ ತನಿಖೆ ನಡೆಸಿದಾಗ ಹತ್ತಾರು ಕೇಸ್​ಗಳು ಬೆಳಕಿಗೆ ಬಂದಿವೆ. ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲೇ‌ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಈ ರೌಡಿಶೀಟರ್ ಯಲ್ಲಪ್ಪನನ್ನ ಅಲ್ಲಿನ ಪೊಲೀಸರು ಗಡಿಪಾರು ಮಾಡಿ ಕರ್ನಾಟಕಕ್ಕೆ ಕಳಿಸಿದ್ದರು.‌ ಕಳೆದ ನಾಲ್ಕು ವರ್ಷಗಳಿಂದ ಬಳ್ಳಾರಿ‌ ನಗರದಲ್ಲೇ ನೆಲೆಸಿದ್ದ ಈ ಯಲ್ಲಪ್ಪ ದುರಂತ ಅಂತ್ಯ ಕಂಡಿದ್ದಾನೆ.

ಯಲ್ಲಪ್ಪ ಮೇಲಿರುವ ಪ್ರಕರಣಗಳೆಷ್ಟು?: ಕೊಲೆಗೀಡಾದ ಯಲ್ಲಪ್ಪ ಕರ್ನಾಟಕ ಮತ್ತು ನೆರೆಯ ಆಂಧ್ರಪ್ರದೇಶ ರಾಜ್ಯಗಳಿಗೂ ಮೋಸ್ಟ್ ವಾಂಟೆಡ್‌ ಕ್ರಿಮಿನಲ್ ಆಗಿದ್ದ ಈತ. ಮಾಜಿ ನಕ್ಸಲೇಟ್ ಕೂಡ ಆಗಿದ್ದ. ಬರೀ ಕೊಲೆ, ದರೋಡೆ, ಸುಲಿಗೆಯನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡಿದ್ದ ಯಲ್ಲಪ್ಪ ಅನಂತರಪುರ ಜಿಲ್ಲೆ ಉರವಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 8 ಪ್ರಕರಣಗಳು ದಾಖಲಾಗಿವೆ. ಈ ಕಾರಣಕ್ಕಾಗಿಯೇ ಉರವ ಗೊಂಡ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಕೂಡ ಓಪನ್ ಆಗಿತ್ತು. ಇದರ ಜೊತೆಗೆ ಅನಂತಪುರ ಜಿಲ್ಲೆಯಲ್ಲಿಯೇ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿಯೂ ಗುರುತಿಸಿಕೊಂಡಿದ್ದ. ರೌಡಿಶೀಟರ್ ಯಲ್ಲಪ್ಪ ಅಪರಾಧ ಚಟುವಟಿಕೆಗಳಿಗೆ ನೆರೆಯ ಆಂಧ್ರ ಪ್ರದೇಶದ ಪೊಲೀಸರು ಗಡಿಪಾರು ಮಾಡಿದ್ದರು. ಬಳಿಕ ಈತ ಕರ್ನಾಟಕ-ಆಂಧ್ರ ಗಡಿಯಂಚಿನ ಬಳ್ಳಾರಿ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಶ್ರಯ ಪಡೆದಿದ್ದ. ಇತ್ತೀಚೆಗೆ ತನ್ನ ಮಗಳ ಮನೆ ಯಲ್ಲಿ ವಾಸ ಮಾಡಿದ್ದ. ಯಲ್ಲಪ್ಪ ಬಳ್ಳಾರಿಯಲ್ಲಿಯೂ ತನ್ನ ಪಟಾಲಂ ಕಟ್ಟಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇಲ್ಲೂ ಕೂಡ ಅದೇ ರೀತಿ ಕೊಲೆ, ಸುಲಿಗೆ ಮಾಡಿಕೊಂಡು ಇಲ್ಲಿನ ರೌಡಿಶೀಟರ್ ಜೊತೆಗೂಡಿ ಬಳ್ಳಾರಿಯಲ್ಲೂ ತನ್ನ ಅಟ್ಟಹಾಸ ಮುಂದುವರೆಸಿದ್ದ. ಈ ಪರಿಣಾಮವಾಗಿಯೇ ಆಗತಾನೆ ರೌಡಿಸಂಗೆ ಕಾಲಿಟ್ಟು ಬಳ್ಳಾರಿಯಲ್ಲಿ ಕುಖ್ಯಾತಿ ಪಡೆಯುತ್ತಿದ್ದ ಬಿಜೆಪಿ ಮುಖಂಡ ಬಂಡಿ ರಮೇಶ್​​ನನ್ನು ಮತ್ತೊಬ್ಬ ರೌಡಿಶೀಟರ್ ಜಗ್ಗನ ಜೊತೆಗೂಡಿ ಕೊಲೆ ಮಾಡಿ ಜೈಲು ಸೇರಿದ್ದ. ಅಂದಹಾಗೆ ಹತ್ಯೆಯಾದ ಯಲ್ಲಪ್ಪ ಹೆಸರಿನಲ್ಲಿ ರಾಜ್ಯದ ಬಳ್ಳಾರಿ ಗ್ರಾಮಾಂತರದಲ್ಲಿ ಎರಡು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣಗಳಿವೆ. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಯಲ್ಲಪ್ಪ ಸುಧಾರಿಸಲಿಲ್ಲ. ಕೆಲವು ವಿಚಾರಗಳಲ್ಲಿ ಬಳ್ಳಾರಿಯಲ್ಲಿರುವ ರೌಡಿಶೀಟರ್ ಮಧ್ಯೆ ಭಿನ್ನಾಭಿಪ್ರಾಯ, ಮನಸ್ತಾಪ ಬಂದು ಹಲವು ಗುಂಪುಗಳಾಗಿದ್ದವು ಎಂಬ ಮಾತಿದೆ. ಈ ಭಿನ್ನಾಭಿಪ್ರಾಯ, ಹಳೆಯ ದ್ವೇಷಗಳೇ ಯಲ್ಲಪ್ಪನ ಭೀಕರ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಈ ಅನುಮಾನದಿಂದಲೇ ಯಲ್ಲಪ್ಪನ ಪತ್ನಿ ಸಾಲಮ್ಮ ರೌಡಿಶೀಟರ್ ಜಗ್ಗ ಆತನ ಸಹಚರರು ಹಾಗೂ ಮತ್ತೊಬ್ಬ ರೌಡಿಶೀಟರ್ ಅಂದ್ರಾಳ್ ಸೀತಾರಾಮ ಹಾಗೂ ಆತನ ಸಹಚರ ಮೇಲೆ ಹಳೆಯ ದ್ವೇಷಕ್ಕೆ ಹತ್ಯೆ ಮಾಡಿದ್ದಾರೆಂದು ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊಲೆಗೆ ಸೀನಾ, ಕೃಷ್ಣ, ಅಬ್ದುಲ್ ಸಹಕರಿಸಿದ್ದಾರೆ ಎಂದು ಹತ್ಯೆಯಾದ ಯಲ್ಲಪ್ಪನ ಪತ್ನಿ ಸಾಲಮ್ಮ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا