Urdu   /   English   /   Nawayathi

ಬಿಜೆಪಿ ಶಾಸಕರಿಂದ ಪರ್ಸಂಟೇಜ್ ಕೆಲಸ: ಮಾಜಿ ಸಚಿವ ರಮಾನಾಥ ರೈ ಆರೋಪ

share with us

ಮಂಗಳೂರು: 26 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಕೆಲ ಬಿಜೆಪಿ ಶಾಸಕರು ಪರ್ಸಂಟೇಜ್ ಮೇಲೆ ಕೆಲಸ ‌ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪ ಮಾಡಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕೆಲ ಕೆಲಸಗಳಿಗೆ ಶಾಸಕರಿಗೆ ಪರ್ಸಂಟೇಜ್ ಕೊಟ್ಟು ಮಾಡಿಸಬೇಕಿದೆ. ಈ ಬಗ್ಗೆ ನನ್ನಲ್ಲಿ ಸಾಕ್ಷಿ ಇದೆ‌. ಆದರೆ, ಯಾರು ಶಾಸಕರು ಎಂದು ಹೇಳುವುದಿಲ್ಲ ಎಂದರು. ಕಾಂಗ್ರೆಸ್ ಬಗ್ಗೆ ಬಿಜೆಪಿ ಟೀಕೆ ದುರಂಹಕಾರದಿಂದ ಮಾಡಲಾಗುತ್ತಿದೆ. ಅವರಿಗೆ ಅಧಿಕಾರದ ಮದ ಇದೆ. ಜನರು ಮತ ಕೊಟ್ಟ ಮಾತ್ರಕ್ಕೆ ಜನರನ್ನು ತಾವು ಹೇಳಿದಂತೆ ಕೇಳುವವರು ಎಂದು ತಿಳಿದಿದ್ದಾರೆ. ಬಿಜೆಪಿಗೆ ಅಧಿಕಾರ ಮಾಡಲು ಗೊತ್ತಿಲ್ಲ. ಅಧಿಕಾರದ ಅಮಲಿನಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا