Urdu   /   English   /   Nawayathi

'ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ದೆಹಲಿ ಪೊಲೀಸರ ಹಿಂದೇಟಿಗೆ ಕಾರಣ'

share with us

ಬೆಂಗಳೂರು: 26 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ತಡೆಯಲು ಪೊಲೀಸರು ಹಿಂದೇಟು ಹಾಕಲು ಮಂಗಳೂರು ಗೋಲಿಬಾರ್‌ ವಿಚಾರವಾಗಿ ವಿಪಕ್ಷಗಳು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ. ಹಿಂಸಾಚಾರ ಪೂರ್ವ ನಿಯೋಜಿತವಾಗಿದ್ದು, ಇದರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ. ಇದೇ ಪರಿಸ್ಥಿತಿಯನ್ನು ಡಿಸೆಂಬರ್ 19, 2019ರಂದು ಮಂಗಳೂರು ಅನುಭವಿಸಿತ್ತು ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದಂತಹ ಸಂದರ್ಭದಲ್ಲಿ ಮಂಗಳೂರು ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಗೋಲಿಬಾರ್ ನಡೆಸುವ ಪರಿಸ್ಥಿತಿ ಉದ್ಭವಿಸಬೇಕಾಯಿತು. ಆದರೆ ಗೋಲಿಬಾರ್ ಪ್ರಕರಣಕ್ಕೆ ಪೊಲೀಸರನ್ನೇ ವಿಪಕ್ಷಗಳು ಆರೋಪಿಯನ್ನಾಗಿಸಿವೆ‌. ಗೋಲಿಬಾರ್ ಈಗ ಪಿ.ಐ.ಎಲ್ ಸೇರಿದಂತೆ ನ್ಯಾಯಿಕ ಪ್ರಕ್ರಿಯೆಗಳಲ್ಲಿ ಮುಳುಗಿದೆ. ಇದರಿಂದ ಬೇಸತ್ತು ವಿಪಕ್ಷಗಳ ಟೀಕೆಯಿಂದಾಗಿ ದೆಹಲಿ ಪೊಲೀಸರು ಪ್ರಾಯಶಃ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೇಟಿಗೆ ಇದೇ ಕಾರಣವಾಗಿರಬಹುದು ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا