Urdu   /   English   /   Nawayathi

ಗ್ರಾಪಂ ಇಬ್ಬಗೆ ನೀತಿ: ಮಹಿಳಾ ಮೀನು ಮಾರಾಟಗಾರರಿಂದ ಅನಿರ್ದಿಷ್ಟಾವಧಿ ಮುಷ್ಕರ

share with us

ಭಟ್ಕಳ: 25 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ನಗರದ ಶಿರಾಲಿ ಮೀನು ಮಾರುಕಟ್ಟೆಯ ಹೊರಗೆ ಖಾಸಗಿ ವ್ಯಕ್ತಿಯೊಬ್ಬನಿಗೆ ಅಂಗಡಿ ಇಡಲು ಅನುಮತಿ ನೀಡಿದ ಗ್ರಾಮ ಪಂಚಾಯತ್ ವಿರುದ್ಧ ಮಹಿಳಾ ಮೀನು ಮಾರಾಟಗಾರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ತಾಲೂಕಿನ ಶಿರಾಲಿ ಮೀನು ಮಾರುಕಟ್ಟೆಯ ಮುಂಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಮಹಿಳಾ ಮೀನು ಮಾರಾಟಗಾರರು ಪಂಚಾಯತ್ ಮುಂಭಾಗದಲ್ಲಿ ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಲಿ, ಪಿಡಿಒ ಆಗಲಿ ಇವರ ಈ ಪ್ರತಿಭಟನೆಗೆ ಕ್ಯಾರೆ ಎನ್ನದ ಹಿನ್ನೆಲೆ ಒಂದು ಹೆಜ್ಜೆ ಮುಂದೆ ಹೋಗಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಒಂದು ಕಡೆ ಶಿರಾಲಿ ಗ್ರಾಮ ಪಂಚಾಯತ್ ಬೀದಿಗಳಲ್ಲಿ ಮೀನು ಮಾರಾಟ ಮಾಡಬೇಡಿ ಮೀನು ಮಾರುಕಟ್ಟೆಯಲ್ಲೇ ಮೀನು ಮಾರಾಟ ಮಾಡಿ ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮಾತನಾಡುತ್ತಾರೆ. ಈಗ ಖಾಸಗಿ ವ್ಯಕ್ತಿಯೊಬ್ಬರಿಗೆ ಮೀನು ಮಾರುಕಟ್ಟೆಯ ಮುಂಭಾಗದಲ್ಲಿ ಮೀನು ಮಾರಾಟ ಮಾಡಲು ಅನುಮತಿ ಪತ್ರವನ್ನು ನೀಡಿ ನಂತರ ರದ್ದು ಪಡಿಸಿದೆ. ಆದರೆ, ಖಾಸಗಿ ವ್ಯಕ್ತಿ ಮೀನು ಮಾರಾಟ ಮಾಡುವುದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವವರೆಗೂ ಗ್ರಾಮ ಪಂಚಾಯತ್ ಎದುರು ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆಯನ್ನು ಮುಂದುವರೆಸಲಿದ್ದೇವೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا