Urdu   /   English   /   Nawayathi

ಹೊರ ರಾಜ್ಯಗಳ ಮೀನುಗಾರರಿಂದ ನಿಷೇಧಿತ ಮೀನುಗಾರಿಕೆ ಜೋರು

share with us

ಕಾರವಾರ: 23 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಹೊರ ರಾಜ್ಯಗಳ ಮೀನುಗಾರರಿಂದ ನಿಷೇಧಿತ ಮೀನುಗಾರಿಕೆ ಜೋರಾಗಿದೆ. ಕ್ಯಾಸುರಿನಾ ಅಥವಾ ಗಾಳಿ ಮರದ ಟೊಂಗೆಗಳನ್ನು ಕಡಿದು ಸಮುದ್ರದಲ್ಲಿ ಮುಳುಗಿಸಿ ವಾರದ ನಂತರ ಅದರ ಮೇಲೆ ಬಂದು ಕೂರುವ ಕಪ್ಪೆ ಬೊಂಡಾಸ್ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಕೇರಳ ತಮಿಳುನಾಡು ಭಾಗಗಳಿಂದ ಬಂದು ಇಲ್ಲಿ ಮೀನುಗಾರಿಕೆ ನಡೆಸುವ ಸುಮಾರು 200 ಕ್ಕೂ ಅಧಿಕ ಜನರಿಂದ ಈ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಿದೆ. ಸ್ಥಳೀಯ ಕೆಲವರು ಹಣದ ಆಸೆಗಾಗಿ ನೋಂದಣಿ ಸಂಖ್ಯೆ ಇಲ್ಲದ ಬೋಟ್​ಗಳನ್ನು ಹೊರ ರಾಜ್ಯದ ಮೀನುಗಾರರಿಗೆ ಒದಗಿಸುತ್ತಿದ್ದಾರೆ. ಈ ರೀತಿ ಅವೈಜ್ಞಾನಿಕ ಮೀನುಗಾರಿಕೆಗಾಗಿ ಗಾಳಿ ಮರ ಗಳನ್ನು ಪ್ಲಾಸ್ಟಿಕ್ ಚೀಲಗಳನ್ನು, ತೀರದ ಮರಳನ್ನು ಸಮುದ್ರಕ್ಕೆ ಒಯ್ದು ಹಾಕಲಾಗುತ್ತದೆ. ಇದರಿಂದ ನೈಸರ್ಗಿಕ ಸ್ವತ್ತುಗಳು ನಾಶವಾಗುವ ಜತೆಗೆ ಸಾಂಪ್ರದಾಯಿಕ ಮೀನುಗಾರಿಕೆಗೂ ತೊಂದರೆ. ನಿಷೇಧಿತ, ಅವೈಜ್ಞಾನಿಕ ಮೀನುಗಾರಿಕೆ ನಡೆಸುವವರನ್ನು ಹಿಡಿದು ಕ್ರಮ ವಹಿಸಬೇಕು ಎಂದು ಬೈತಖೋಲ್ ಭಾಗದ ಸಾಂಪ್ರದಾಯಿಕ ಮೀನುಗಾರರು ಆಗ್ರಹಿಸಿದ್ದಾರೆ.

ಕಪ್ಪೆ ಬೊಂಡಾಸ್ ಮೀನು ಹಿಡಿಯಲು ನಿಷೇಧವಿಲ್ಲ. ಆದರೆ, ಅವೈಜ್ಞಾನಿಕ ಪದ್ಧತಿಯಲ್ಲಿ ಹಿಡಿಯಲು ನಿಷೇಧ ವಿದೆ. ಹೊರ ರಾಜ್ಯದ ಮೀನುಗಾರರು ನಡು ರಾತ್ರಿ ತೆರಳಿ ಈ ಕ್ರಮ ಅನುಸರಿಸುವುದರಿಂದ ಅವರನ್ನು ಸಾಕ್ಷ್ಯ ಸಮೇತ ಹಿಡಿಯುವುದು ಕಷ್ಟ. | ಪ್ರತೀಕ ಶೆಟ್ಟಿ ಕಾರವಾರ ಮೀನುಗಾರಿಕೆ ಇಲಾಖೆ ಎಡಿ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا