Urdu   /   English   /   Nawayathi

ಬೆಳಗಾವಿ: ಪತ್ನಿಯ ಖುಷಿಗಾಗಿ ಕಾರು ಕೊಡಿಸಿದ ಯೋಧ ಅನೈತಿಕ ಸಂಬಂಧಕ್ಕೆ ಬಲಿ

share with us

ಬೆಳಗಾವಿ: 23 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಪತ್ನಿಯ ಖುಷಿಗಾಗಿ ಕಾರು ಕೊಡಿಸಿ ಡರಿವರ್ ನೇಮಿಸಿದ್ದ ಯೋಧನೊಬ್ಬ ಅನೈತಿಕ ಸಂಬಂಧಕ್ಕೆ ಬಲಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಈ ಕುರಿತು ಯೋಧ ದೀಪಕ್ ಪತ್ನಿ ಅಂಜಲಿ ಹಾಗೂ ಆಕೆಯ ಪ್ರಿಯಕರ ಪ್ರಶಾಂತ್ ಎನ್ನುವವರನ್ನು ಬೆಳಗಾವಿ ತಾಲೂಕು ಮಾರಿಹಾಳ ಪೋಲೀಸರು ಬಂಧಿಸಿದ್ದಾರೆ. ಇನ್ನು ಘಟನೆಯಲ್ಲಿ ಫಾಲುದಾರರಾಗಿದ್ದ ನವೀನ್ ಕೆಂಗೇರಿ ಹಾಗೂ ಪ್ರವೀಣ್ ಎನ್ನುವವರಿಗೆ ಹುಡುಕಾಟ ನಡೆದಿದೆ.

ಘಟನೆ ವಿವರ

14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್ ಪಟ್ಟಣದಾರ್ (32) ಎಂಬಾತನೇ ಕೊಲೆಯಾಗಿದ್ದ ದುರ್ದೈವಿ. ದೀಪಕ್-ಅಂಜಲಿ ದಂಪತಿ ಕೆಲವು ವರ್ಷಗಲ ಹಿಂದೆ ಮದುವೆಯಾಗಿದ್ದು ಅವರಿಗೆ 2 ವರ್ಷದ ಹೆಣ್ಣುಮಗುವಿದೆ. ಯೋಧ ದೀಪಕ್ ತಾನು ಗಡಿ ಕಾಯುವ ವೇಳೆ ತನ್ನ ಪತ್ನಿಯು ತವರಿನಲ್ಲಿ ಖುಷಿಯಾಗಿರಲೆಂದು ಆಕೆಗೆ ಕಾರು ಕೊಡಿಸಿದ್ದ ಹಾಗೆ ಪ್ರಶಾಂತ್ ಎಂಬ ಕಾರು ಚಾಲಕನನ್ನು ಸಹ ನೇಮಕ ಮಾಡಿದ್ದ. ತಾನು ಆರು ತಿಂಗಳಿಗೊಮ್ಮೆ ಬಂದು ವಾರಗಳ ಕಾಲ ರಜೆಯನ್ನು ಮುಗಿಸಿ ವಾಪಾಸಾಗುತ್ತಿದ್ದ. ಹೀಗಿರಲು ಅಂಜಲಿ ಹಾಗೂ ಕಾರು ಚಾಲಕನ ನಡುವೆ ಪ್ರೇಮಾಂಕುರವಾಗಿ ಅವರಿಬ್ಬರೂ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಕಳೆದ ಜನವರಿ ಮೂರನೇ ವಾರ ಯೋಧ ದೀಪಕ್ ಊರಿಗೆ ಆಗಮಿಸಿದ್ದಲ್ಲದೆ  ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಿವೇಶನ ಖರೀದಿಸಿ ಮನೆಯನ್ನೂ ಕಟ್ಟಿಸಿದ್ದ. ಯೋಧನಾಗಿದ್ದ ದೀಪಕ್ ಇನ್ನಾರು ತಿಂಗಳಲ್ಲಿ ನಿವೃತ್ತನಾಗಲಿದ್ದು ಬಳಿಕ ಪೋಲೀಸ್ ಇಲಾಖೆಗೆ ಸೇರುವ ಇಚ್ಚೆ ಹೊಂದಿದ್ದ. ಇತ್ತ ಯೋಧ ಪತಿ ದೀಪಕ್ ನಿವೃತ್ತನಾದ ಬಳಿಕ ಇಲ್ಲಿಯೇ ನೆಲೆಸುವುದಾಗಿ ಹೇಳಿದಾಗ ಚಾಲಕ ಪ್ರಶಾಂತ್ ನೊಡನೆ ಅನೈತಿಕ ಸಂಬಂಧ ಹೊಂದಿದ್ದ ಅಂಜಲಿಗೆ ತಲೆನೋವು ಪ್ರಾರಂಭವಾಗಿತ್ತು. ಇನ್ನು ತನ್ನ ಪತ್ನಿ ಕಾರು ಚಾಲಕನೊಡನೆ ಸಂಬಂಧ ಹೊಂದಿರುವುದರ ಬಗೆಗೆ ದೀಪಕ್  ಗೆ ಕೂಡ ಸುಳಿವಿತ್ತು ಎನ್ನಲಾಗಿದೆ. ಇದು ಅಂಜಲಿಗೆ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಆಗ ಆಕೆ ತನ್ನ ಪ್ರಿಯತಮ ಪ್ರಶಾಂತ್ ಜತೆ ಸೇರಿ ಪತಿಯನ್ನೇ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಳು. ಹತ್ಯೆಗೆ ಸಂಚು ರೂಪಿಸಿದ್ದ ನಂತರ ಅಂಜಲಿ ಹಾಗೂ ಆಕೆಯ ಪ್ರಿಯಕರ ಸಾಮಾಜಿಕ ತಾಣ ಬಳಕೆಯನ್ನು ಸಂಪೂರ್ಣ ಬಂದ್ ಮಾಡಿದ್ದರು.ಹತ್ಯೆಗೆ ಮುನ್ನ ತಮ್ಮ ಮೊಬೈಲ್ ಗಳನ್ನು ಬೇರೆ ಕಾರುಗಳಲ್ಲಿ ಇರಿಸಿದ್ದರು. ಆ ಕಾರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದೆ. ಇಷ್ತಾಗಿ ಪ್ರಶಾಂತ್ ನ ಇಬ್ಬರು ಸ್ನೇಹಿತರ ನೆರವಿನೊಡನೆ ಜ.. 28ರಂದು ಯೋಧನನ್ನು ಗೋಕಾಕದ ಗೊಡಚನಮಲ್ಕಿ ಜಲಪಾತಕ್ಕೆ ಹೋಗೋಣವೆಂದು ಪತ್ನಿ ಒತ್ತಾಯಿಸಿದ್ದಳು. ಇದಕ್ಕೆ ಒಪ್ಪಿದ ದೀಪಕ್ ಕಾರು ಚಾಲಕ ಪ್ರಶಾಂತ್ ಸಹ ಜತೆಯಾಗಿ ಮೂವರೂ ಜಲಪಾತ ವೀಕ್ಷಣೆಗೆ ತೆರಳಿದ್ದಾರೆ. ಈ ಮೊದಲೇ ನಿರ್ಧಾರವಾದಂತೆ ಇದೇ ಕಾರಿನಲ್ಲಿ ಪ್ರಶಾಂತ್ ನ ಸ್ನೇಹಿತರು ಸಹ ಆಗಮಿಸಿದ್ದು ಅವರು ಅಂಜಲಿ ಪತಿ ಯೋಧ ದೀಪಕ್ ಗೆ ದಾರಿಯಲ್ಲೇ ಸಾಕಷ್ಟು ಮದ್ಯವನ್ನು ಕುಡಿಸಿದ್ದಾರೆ. ಬಳಿಕ ಜಲಪಾತಕ್ಕೆ ತೆರಳಿ ಆತನನ್ನು ಹತ್ಯೆ ಮಾಡಿದ್ದಲ್ಲದೆ ಶವವನ್ನು ಜಲಪಾತದಲ್ಲೇ ಬಿಸಾಡಿದ್ದಾರೆ. ಮೊದಲು ಜಲಪಾತದ ಮೇಲಿಂದ ತಳ್ಳಲು ನೋಡಿದ್ದ ದುಷ್ಕರ್ಮಿಗಳಿಗೆ ಅದು ಸಾಧ್ಯವಾಗದೆ ಹೋದಾಗ ಯೋಧನ ಕತ್ತು ಸೀಳಿ ಹತ್ಯೆ ನಡೆಸಿದ್ದಾರೆ.

ಇದಾಗಿ ನಾಲ್ಕಾರು ದಿನದ ನಂತರ ಫೆಬ್ರವರಿ 4ರಂದು ಪತಿ ಕಾಣೆಯಾಗಿದ್ದಾನೆ ಎಂದು ಯೋಧನ ಪತ್ನಿ ಅಂಜಲಿ ಮಾರಿಹಾಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಅಷ್ಟೇ ಅಲ್ಲದೆ ದೂರು ದಾಖಲಿಸಿದ ಮರುದಿನವೇ ಪೋಲೀಸರ ಕಾರ್ಯವೈಖರಿ ಸರಿಯಿ;ಲ್ಲ ಎಂದು ಠಾಣೆ ಎದುರು ಪ್ರತಿಭಟನೆ ಸಹ ನಡೆಸಿದ್ದಾಳೆ. ಇನ್ನು ಅಂಜಲಿ ಹಾಗೂ ಪ್ರಿಯಕರ ತಾವು ಯೋಜನೆಯಂತೆ ಪೋಲೀಸ್ ದೂರು ಸಲ್ಲಿಸುವ ಮುನ್ನ ಕೃತ್ಯ ನಡೆಸಿದ ಸ್ಥಳಕ್ಕೆ ತೆರಳಿ ಯೋಧನ ಮೃತದೇಹವಿದೆಯೆ ಇಲ್ಲವೆ ಎಂದು ಪರಿಶೀಲಿಸಿದ್ದಾರೆ. ಆದರೆ ಯೋಧ ದೀಪಕ್ ಶವವನ್ನು ಅದಾಗಲೇ ಪ್ರಾಣಿ ಪಕ್ಷಿಗಳು ತಿಂದು ಹಾಕಿದ್ದವು. ಹಾಗೆ ಶವವಿರುವ ಬಗೆಗೆ ಪರಿಶೀಲನೆಗೆ ತೆರಳಿದ್ದ ಆರೋಪಿಗಳು ಮರಳ್ಲುವಾಗ ಬೇರೆ ಸಿಮ್ ಕಾರ್ಡ್ ಬಳಕೆ ಮಾಡಿದ್ದಾರೆ. ಈ ಸಿಮ್ ಲೊಕೇಷನ್ ಮೂಲಕ ಪೋಲೀಸರು ಆರೋಪಿಗಳ ಪತ್ತೆಗೆ ಮುಂದಾದಾಗ ಅಂಜಲಿ ಹಾಗೂ ಪ್ರಶಾಂತ್ ಅವರ ಘೋರ ದುಷ್ಕೃತ್ಯ ಬಯಲಾಗಿದೆ.ಪೋಲೀಸರು ಅಂಜಲಿ ಹಾಗೂ ಆಕೆಯ ಪ್ರಿಯಕರ ಕಾರು ಚಾಲಕನನ್ನು ಬಂಧಿಸಿದ್ದಾರೆ. ಅಂಜಲಿ ಹಾಗೂ ಕಾರು ಚಾಲಕನನ್ನು ಬಂಧಿಸುವ ಮುನ್ನ ಆರೋಪಿ ಪ್ರಶಾಂತ್ ಸ್ನೇಹಿತರು ಪ್ರಕರಣ ಮುಚ್ಚಿ ಹೋಗಿದೆ ಎಂದು ತಿಳಿದು ಯೋಧನ ಕಾರನ್ನು ಮಾರಾಟ ನಡೆಸಲು ಯತ್ನಿಸಿದ್ದರು. ಆದರೆ ಯಾವಾಗ ಅಂಜಲಿ ಬಂಧನದ ವಿಚಾರ ತಿಳಿಯಿತೋ ಕಾರನ್ನು ಇದ್ದಲ್ಲಿಯೇ ಬಿಟ್ಟು ಅವರಿಬ್ಬರೂ ಪರಾರಿಯಾಗಿದ್ದಾರೆ. ಇತ್ತ ಅಂಜಲಿ ಹಾಗೂ ಪ್ರಶಾಂತ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಪೋಲೀಸರು ಆಕೆಯಿಂದ ಯೋಧನ ಹತ್ಯೆ ಸಂಚನ್ನು ಬಯಲು ಮಾಡಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا