Urdu   /   English   /   Nawayathi

ದೇಶದ್ರೋಹಿ ಅಮೂಲ್ಯ ಬಗ್ಗೆ ಡಿಕೆಶಿ ಅಭಿಪ್ರಾಯವೇನು ಗೊತ್ತೇ ..?

share with us

ಬೆಂಗಳೂರು: 23 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ದೇಶದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ನಾನೂ ಕೂಡ ಪ್ರೋತ್ಸಾಹ ಕೊಡುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ಕಾರ್ಯಕ್ರಮವೊಂದರಲ್ಲಿ ಹೆಣ್ಣು ಮಗಳು ಏನು ಹೇಳಲು ಹೊರಟಿದ್ದಳೋ ಗೊತ್ತಿಲ್ಲ. ಧ್ವನಿ ಎತ್ತುವವರನ್ನು ಮೊಟಕುಗೊಳಿಸಬಾರದು. ಈ ವಿಚಾರದಲ್ಲಿ ಮುಂದಾಗುತ್ತದೋ ಕಾದುನೋಡೋಣ. ಹರಿಬರಿ ಮಾಡುವುದು ಬೇಡ. ಬಿಜೆಪಿಯವರಿಗೆ ಕಾಂಗ್ರೆಸ್ ಬಿಟ್ಟರೆ ಬೇರೇನೂ ಕಾಣುವುದಿಲ್ಲ. ಸಿಎಎ ಮತ್ತು ಎನ್‍ಆರ್‍ಸಿ ಕಾಂಗ್ರೆಸ್ ಪಕ್ಷದ ಸಮಸ್ಯೆಯಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರವಾಗಿದೆ ಎಂದರು. ಎಲ್ಲದಕ್ಕೂ ಕಾಂಗ್ರೆಸ್ ವಿರುದ್ಧ ಮಾತನಾಡುವುದನ್ನು ಬಿಟ್ಟು ದೇಶದ ಪರ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಮತ ಹಾಕಿ ಎಂದು ಹೇಳಿದರು. ಮುಂದೆ ಅಧಿಕಾರಕ್ಕೂ ಬರುತ್ತಾರೆ ಎಂದು ಹೇಳಿದ್ದರು. ಇಂತಹ ಹೇಳಿಕೆಗಳಿಂದ ಅಂತಾರಾಷ್ಟ್ರೀಯ ಸಂಬಂಧಗಳು ವೃದ್ಧಿಸುತ್ತವೆಯೇ ಎಂದು ಪ್ರಶ್ನಿಸಿದರು. ನಮ್ಮ ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಅವರಿಗೇನು ಆಗಬೇಕು? ಅದೇರೀತಿ ಅಮೆರಿಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ನಮಗೇನಾಗಬೇಕು? ಉಭಯ ರಾಷ್ಟ್ರಗಳ ಸಂಬಂಧ ಚೆನ್ನಾಗಿರಬೇಕಷ್ಟೇ ಎಂದರು. ಪ್ರವಾಸೋದ್ಯಮ ಇಲಾಖೆಯಿಂದ ಕ್ಯಾಸಿನೋ ಸೆಂಟರ್ ಸ್ಥಾಪನೆ ವಿಚಾರವನ್ನು ಮುಂಬರುವ ಬಜೆಟ್‍ನಲ್ಲಿ ಪ್ರಕಟಿಸಿ ವಿವರಣೆ ಕೊಡಲಿ. ರಾಜ್ಯಕ್ಕೆ ಯಾವ ರೀತಿ ಒಳ್ಳೆಯದಾಗುತ್ತದೆ ಎಂಬುದನ್ನು ಹೇಳಲಿ ನೋಡೋಣ ಎಂದು ಪ್ರತಿಕ್ರಿಯಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا