Urdu   /   English   /   Nawayathi

ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅಗ್ನಿ ಅವಘಡ

share with us

ಮಂಗಳೂರು: 19 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ನಗರದ ಕುಡುಪು ಬಳಿಯ ಮಂದಾರದ ನಾಗಬನದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಇಡೀ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಜೆಸಿಬಿ ಮೂಲಕ‌ ಕಸದ ರಾಶಿಯ ಮೇಲೆ ಮಣ್ಣು ಎಳೆಸಿ ಬೆಂಕಿ ನಂದಿಸಲಾಯಿತು. ತಡರಾತ್ರಿ 3 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳೀಯರು ದಟ್ಟ ಹೊಗೆ ನೋಡಿ ಪಾಲಿಕೆ ಹಾಗೂ ನಿರ್ವಹಣಾ ಘಟಕದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳದಲ್ಲಿ ದುರ್ನಾತ ಹೊಮ್ಮುತ್ತಿದ್ದು, ಸುತ್ತಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ಈ ಹಿಂದೆ ಸುಮಾರು 25ಕ್ಕೂ ಅಧಿಕ ಮನೆಗಳು ತ್ಯಾಜ್ಯ ರಾಶಿಯೊಳಗೆ ಹುದುಗಿ ಹೋಗಿದ್ದವು. ಈಗ ಬೆಂಕಿ ಅವಘಡಗಳಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا