Urdu   /   English   /   Nawayathi

ಪಾಕ್ ಪರ ಘೋಷಣೆ ಕೂಗಿದವರನ್ನು ರಿಲೀಸ್ ಮಾಡಿ, ಶಾಹಿನ್ ಶಾಲೆ ಮಗುವಿನ ತಾಯಿ ಶಿಕ್ಷಿಸಿದ್ದೇಕೆ? ಕಾಂಗ್ರೆಸ್ ಪ್ರಶ್ನೆ

share with us

ಬೆಂಗಳೂರು: 16 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ದೇಶದ್ರೋಹದ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಹುಬ್ಬಳ್ಳಿ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿದ್ದಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಯು,ಟಿ ಖಾದರ್ ಸರ್ಕಾರದ ನಿರ್ಧಾರಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸರು ಮಾಡುತ್ತಿರುವುದು ಸರಿಯಿಲ್ಲ. ಪೊಲೀಸರು ಒಂದೊಂದು ಪ್ರಕರಣದಲ್ಲಿ ಒಂದೊಂದು ರೀತಿ ತಾರತಮ್ಯ ಮಾಡ್ತಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗೋದು ನಿಜವಾದ ದೇಶದ್ರೋಹ. ಆದರೆ, ಪೊಲೀಸರು ಶಾಹಿನ್ ಶಾಲೆಯಂಥ ಪ್ರಕರಣದಲ್ಲಿ ಕೇಸ್ ಹಾಕ್ತಾರೆ. ಇಂಥವರನ್ನು ಬಿಟ್ಟು ಕಳಿಸ್ತಾರೆ. ಇದೆಲ್ಲ ಸರಿಯಿಲ್ಲ. ಹುಬ್ಬಳ್ಳಿ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ತೀನಿ. ಎಲ್ಲ ವಿಚಾರಗಳನ್ನು ಸದನದಲ್ಲಿ ಚರ್ಚೆ ಮಾಡ್ತೀನಿ ಎಂದು ಹೇಳಿದರು. ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿ, ಮೊದಲು ರಾಜ್ಯ ಪೊಲೀಸರು ದಕ್ಷರಾಗಿದ್ದರು. ಆದರೀಗ ಪೊಲೀಸ್ ಇಲಾಖೆಯಲ್ಲೂ ರಾಜಕೀಯ ಹೊಕ್ಕಿದೆ. ದೇಶದ್ರೋಹ ಆರೋಪ ಇರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ಯಾಕೆ? ಪೊಲೀಸರ ನಡೆ ಅನುಮಾನ ಮೂಡಿಸುತ್ತಿದೆ. ಪೊಲೀಸರು ಬಿಜೆಪಿ ಪಕ್ಷದ ಸೂಚನೆ ಪ್ರಕಾರ ಕೆಲಸ ಮಾಡ್ತಿದ್ದಾರೆ. ಯಾರ ಮೇಲೆ ಕೇಸು ದಾಖಲಿಸುವುದು ಅಗತ್ಯವಿಲ್ಲವೋ ಅವರ ಮೇಲೆ ಪ್ರಕರಣ ಹಾಕ್ತಾರೆ? ಆದರೆ, ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಬಿಡ್ತಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಹೆಗಡೆ, ಸೋಮಶೇಖರ್ ರೆಡ್ಡಿ, ಸಿಟಿ ರವಿ ಇಂಥವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಮಹಾತ್ಮ ಗಾಂಧಿ ವಿರುದ್ಧ ಮಾತನಾಡಿದರೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ತನಿಖೆ ಮಾಡದೇ ಬಿಟ್ಟಿದ್ದಾರೆ. ಸಣ್ಣಪುಟ್ಟ ಒತ್ತಡಗಳು ಸಹಜವಾಗಿ ಇರುತ್ತವೆ. ಆದರೆ, ಇದು ಮಾತ್ರ ವಿಪರೀತವಾಗಿದೆ ಎಂದರು. ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿದೆ. ಪೊಲೀಸರ ನಡೆಯ ಬಗ್ಗೆ ಜನರಿಗೆ ಸಂಶಯ ಶುರುವಾಗಿದೆ. ಪೊಲೀಸರು ನ್ಯಾಯಪರವಾಗಿ ನಡೆದುಕೊಳ್ತಿಲ್ಲ. ಡಿಜಿ ಹೇಳಿದಂತೆ ಆಯುಕ್ತರು, ಆಯುಕ್ತರು ಹೇಳಿದಂತೆ ಇನ್ಸ್​ಪೆಕ್ಟರ್ ಕೇಳ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا