Urdu   /   English   /   Nawayathi

ಮಂಚದಿಂದ ಬಿದ್ದು ನರಳಾಡಿದ್ರೂ ಬಗ್ಗಿ ನೋಡದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ: ಸಾರ್ವಜನಿಕರ ಆಕ್ರೋಶ

share with us

ಕಲಬುರಗಿ: 16 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಮಂಚದ ಮೇಲಿಂದ ಬಿದ್ದು ಅರ್ಧ ಗಂಟೆ ನರಳಾಡಿದರೂ ಸಿಬ್ಬಂದಿ ಸಹಾಯಕ್ಕೆ ಬಾರದೆ ಅಮಾನವೀಯವಾಗಿ ವರ್ತಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಉಪಚಾರವನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪ ಸದಾ ಕೇಳಿ ಬರುತ್ತಿದೆ. ಆಳಂದ ತಾಲೂಕಿನ ಕಲ್ಲೋಳಿ ಗ್ರಾಮದ ಗುಂಡಪ್ಪ ಎಂಬಾತ ಮಂಚದಿಂದ ಕೆಳಗೆ ಬಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದರು ಯಾವೊಬ್ಬ ಸಿಬ್ಬಂದಿ ಸಹಾಯಕ್ಕೆ ಧಾವಿಸಿಲ್ಲ ಎನ್ನಲಾಗಿದೆ. ಗುಂಡಪ್ಪನ ನೋವು ನೋಡಲಾಗದೆ ಇತರೆ ರೋಗಿಗಳು ಮೇಲಕ್ಕೆ ಎತ್ತಲು ಪ್ರಯತ್ನಿಸಿದ್ದಾರೆ. ಕೊರಳ ಬಳಿ ಗಾಯವಾದ ಹಿನ್ನಲೆ ಮೂರು ದಿನದ ಹಿಂದೆ ಆಸ್ಪತ್ರೆಯ ಮೇಲ್ ವಾರ್ಡ್​ಗೆ ಗುಂಡಪ್ಪ ದಾಖಲಾಗಿದ್ದರು. ಇತ್ತೀಚಿಗೆ ಡಯಾಲಿಸಿಸ್ ಯಂತ್ರದಲ್ಲಿನ ತೊಂದರೆಯಿಂದ ಓರ್ವ ಬಾಲಕ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಈಗ ರೋಗಿಯೊಬ್ಬ ಕೆಳಗೆ ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا