Urdu   /   English   /   Nawayathi

ಫ್ರೀ ಕಾಶ್ಮೀರ್​ ಎಂದಿದ್ದ ಯುವತಿ ಪರ ಸಿದ್ದರಾಮಯ್ಯ ಬ್ಯಾಟಿಂಗ್​: ಮತ್ತೆ ವಕೀಲ ವೃತ್ತಿಗೆ ಮರಳುತ್ತಾರಾ?

share with us

ಮೈಸೂರು: 27 ಜನುವರಿ 2020 (ಫಿಕ್ರೋಖಬರ್ ಸುದ್ದಿ) ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿವಿ ಆವರಣದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ್​ ಫಲಕ ಹಿಡಿದು ದೇಶದ್ರೋಹದ ಪ್ರಕರಣ ಎದುರಿಸುತ್ತಿರುವ ಯುವತಿಯ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್​​ನಲ್ಲಿ ಬೆಂಬಲ ನೀಡಿದ್ದಾರೆ.

  • Siddaramaiah@siddaramaiah

    ಮೈಸೂರಿನಲ್ಲಿ 'Free Kashmir' ಫಲಕ ಹಿಡಿದಿದ್ದ ಯುವತಿಯ ಪರ ನಾನು ವಕಾಲತ್ತು ವಹಿಸುತ್ತಿಲ್ಲ. ನನ್ನ ಲೈಸೆನ್ಸ್‌ ಅನ್ನು ಹಿಂದೆ ಅಮಾನತು ಮಾಡಿದ್ದರು. ಅಮಾನತು ತೆಗೆಯುವಂತೆ ಅರ್ಜಿ ಸಲ್ಲಿಸಿದ್ದೇನೆ.

    ಯುವತಿಯ ಪರ ಯಾರೇ ವಕಾಲತ್ತು ವಹಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ. ಈ ಬಗ್ಗೆ ಗೊಂದಲ ಬೇಡ. 2/4

    646

    1:40 PM - Jan 26, 2020

    Twitter Ads info and privacy

    134 people are talking about this

ಮೈಸೂರು ವಿವಿಯ ಕುವೆಂಪು ಪ್ರತಿಮೆ ಬಳಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪಂಜಿನ ಮೆರವಣಿಗೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ್​ ಪೋಸ್ಟರ್ ಹಿಡಿದಿದ್ದ ನಳಿನಿ ಎಂಬ ಯುವತಿಯ ವಿರುದ್ಧ ದೇಶದ್ರೋಹದ ಆರೋಪದ ಪ್ರಕರಣ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದಾಖಲಾಗಿತ್ತು. ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದ ಯುವತಿ ಪರ ಇಂದು ಮಧ್ಯಾಹ್ನ ಮೈಸೂರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ವಿಚಾರಣೆ ಬರಲಿದ್ದು, ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುವತಿ ಪರ ಯಾರೇ ವಕೀಲರು ವಕಾಲತ್ತು ನಡೆಸಿದರೂ ನನ್ನ ಬೆಂಬಲವಿದೆ ಎಂದು ಟ್ವಿಟ್ಟರ್​ನಲ್ಲಿ​ ಪೋಸ್ಟ್ ಮಾಡಿದ್ದಾರೆ. ಮೈಸೂರು ವಕೀಲರ ಸಂಘದಲ್ಲಿ ನನ್ನ ವಕೀಲ ವೃತ್ತಿಯ ಲೈಸನ್ಸ್ ನನ್ನು ಹಿಂದೆಯೇ ಅಮಾನತು ಮಾಡಿದ್ದಾರೆ. ಈ ಅಮಾನತನ್ನು ಹಿಂಪಡೆಯಲು ನಾನು ಅರ್ಜಿ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಮತ್ತೊಮ್ಮೆ ವಕೀಲ ವೃತ್ತಿಗೆ ಸಿದ್ದರಾಮಯ್ಯ ವಾಪಸ್ ಆಗುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا