Urdu   /   English   /   Nawayathi

ಮುತ್ತೂಟ್​​ ಫೈನಾನ್ಸ್​​​​ನಲ್ಲಿ 77 ಕೆಜಿ ಚಿನ್ನಾಭರಣ ಕಳ್ಳತನ ಪ್ರಕರಣ: ಸಿಸಿಬಿಗೆ ವಹಿಸಲು ನಿರ್ಧಾರ

share with us

ಬೆಂಗಳೂರು: 27 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಪುಲಿಕೇಶಿನಗರದ ಮುತ್ತೂಟ್ ಫೈನಾನ್ಸ್​ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಪುಲಿಕೇಶಿನಗರದ ಮುತ್ತೂಟ್ ಫೈನಾನ್ಸ್​ನಲ್ಲಿ ಕಳೆದ ತಿಂಗಳು ನೇಪಾಳ ಮತ್ತು ಬಿಹಾರ ಸೆಕ್ಯುರಿಟಿ ಗ್ಯಾಂಗ್ ಗೊಡೆ ಕೊರೆದು ಚಿನ್ನಾಭರಣ ಲೂಟಿ ಮಾಡಿತ್ತು. ಹೀಗಾಗಿ ಕೆಲ ಆರೋಪಿಗಳನ್ನ ಬಂಧಿಸಿದಾಗ 77 ಕೆಜಿ ಚಿನ್ನಾಭಾರಣ ಹೊತ್ತ ಮಾಸ್ಟರ್ ಮೈಂಡ್ ನೆಪಾಳದಲ್ಲಿ ತಲೆಮರೆಸಿಕೊಂಡಿದ್ದ ಮಾಹಿತಿ ಬಿಚ್ಚಿಟ್ಟಿದ್ದರು. ಆದರೆ ಪುಲಿಕೇಶಿ‌ನಗರ ಪೊಲೀಸರ ತಂಡ ತೆರಳಿ ಪರಿಶೀಲನೆ ನಡೆಸಿದರೂ ಕೂಡ ಆರೋಪಿಗಳ ಸುಳಿವು ಹಾಗೂ ಚಿನ್ನಾಭರಣದ ಬಗೆಗಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೀಗಾಗಿ ಸದ್ಯ ಪ್ರಕರಣ ಸಿಸಿಬಿಗೆ ಹಸ್ತಾಂತರ ಮಾಡಲು ಪೊಲೀಸ್​ ಇಲಾಖೆ ನಿರ್ಧರಿಸಿದೆ. ಕಳೆದ ಡಿಸೆಂಬರ್ 22ರಂದು ಮುತ್ತೂಟ್ ಫೈನಾನ್ಸ್​​ನಲ್ಲಿ 77 ಕೆಜಿ‌ ಚಿನ್ನ ಎಗರಿಸಿದ್ದ 12 ಮಂದಿ ತಂಡದಲ್ಲಿ ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಬಳಿ ಚಿನ್ನಾಭರಣ ಇರುವ ಕಾರಣ ಪೊಲೀಸರು ಮುಂದಿನ ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆ ನಡುವೆ ಚಿನ್ನ ಅಡವಿಟ್ಟವರ ಎದೆಯಲ್ಲಿ ಢವ ಢವ ಶುರುವಾಗಿದ್ದು, ತಮ್ಮ ಚಿನ್ನಾಭರಣ ಎಲ್ಲಿ ಸಿಗದೇ ಹೊಗುತ್ತೋ ಅನ್ನೋ ಭಯದಲ್ಲಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا