Urdu   /   English   /   Nawayathi

ಕೇರಳ: ಸಿಎಎ ವಿರುದ್ಧ 620 ಕಿಮೀ ಉದ್ದದ ಮಾನವ ಸರಪಳಿ; ನವ ವಿವಾಹಿತರು, ಸಿಎಂ ಭಾಗಿ

share with us

ತಿರುವನಂತಪುರಂ: 27 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಕೇರಳದಲ್ಲಿ ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಲ್ ಡಿಎಫ್ ಪಕ್ಷ ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ವಿರೋಧಿಸಿ 71ನೇ ಗಣರಾಜ್ಯೋತ್ಸವದಂದು 620 ಕಿಮೀ ಉದ್ದದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಮ್ ರಾಜೇಂದ್ರನ್ ಉಪಸ್ಥಿತರಿದ್ದರು. ಸುಮಾರು 70 ಲಕ್ಷ ಜನರು ಮಾನವ ಸರಪಳಿಯಲ್ಲಿ ಪಾಲ್ಗೊಂಡರು. ಸಿಪಿಐ, ಎನ್ ಸಿಪಿ, ಜೆಡಿಎಸ್, ಜೆಡಿಯು ಮತ್ತು ಜೆಎಸ್ ಎಸ್ ಪಕ್ಷದ ಸದಸ್ಯರು ಪಾಲ್ಗೊಂಡಿದ್ದರು. ಕಾಸರಗೋಡಿನಿಂದ ಕಲಿಯಿಕ್ಕವಿಲಾದವರೆಗೆ ಮಾನವ ಸರಪಳಿ ನಿರ್ಮಿಸಲಾಗಿತ್ತು. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಮಾನವ ಸರಪಳಿ ಎಂದು ಗುರುತಿಸಿಕೊಂಡಿತು. ಹಲವು ಸಚಿವರು, ಸಂಸದರು ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಮಾನವ ಸರಪಳಿಯನ್ನು ಸೇರ್ಪಡೆಗೊಂಡರು. ಇದು ರಾಜ್ಯದ 14 ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವಿಸ್ತಾರಗೊಂಡಿತ್ತು. ಜೊತೆಗೆ, ರಾಜ್ಯಾದ್ಯಂತ 250 ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا