Urdu   /   English   /   Nawayathi

ಗಣರಾಜ್ಯೋತ್ಸವ ಸಂಭ್ರಮದ ನಡುವೆ ಅಸ್ಸೋಂನಲ್ಲಿ ಬಾಂಬ್‌ ಸ್ಫೋಟ

share with us

ಅಸ್ಸೋಂ: 26 ಜನುವರಿ 2020 (ಫಿಕ್ರೋಖಬರ್ ಸುದ್ದಿ) ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ ಈಶಾನ್ಯ ರಾಜ್ಯ ಅಸ್ಸೋಂ ಬಾಂಬ್ ಸ್ಫೋಟಕ್ಕೆ ನಲುಗಿದೆ. ದಿಬ್ರುಗರ್ ಜಿಲ್ಲೆಯಲ್ಲಿ ನಾಲ್ಕು ಪ್ರಬಲ ಗ್ರೆನೇಡ್ ಸ್ಫೋಟಗಳು ಮತ್ತು ಚರೈಡಿಯೊ ಜಿಲ್ಲೆಯಲ್ಲಿ ಒಂದು ಬಾಂಬ್ ಸ್ಫೋಟ ಸಂಭವಿಸಿದೆ. ದಿಬ್ರುಗರ್ ಜಿಲ್ಲೆಯ ಗ್ರಹಾಂ ಬಜಾರ್‌, ಅಸ್ತಾ ಆಸ್ಪತ್ರೆಯ ಮುಂಭಾಗ ಹಾಗು ದುಲಿಯಾಜನ್‌ನಲ್ಲಿ ಎಂಬಲ್ಲಿ ಸ್ಫೋಟ ಸಂಭವಿಸಿದೆ. ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಬೆಚ್ಚಿಬಿತ್ತು ಅಸ್ಸೋಂ ..! ಯಾಕಂತೀರಾ? ಹಾಗೆಯೇ ಚರೈಡಿಯೊ ಜಿಲ್ಲೆಯಲ್ಲಿ ಸೋನಾರಿಯ ಟಿಯೋಕ್‌ ಘಾಟ್‌ನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಫೋಟದಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಘಟನೆಯ ಕುರಿತು ತನಿಖೆ ಚುರುಕುಗೊಳಿಸಿರುವುದಾಗಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ್ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا