Urdu   /   English   /   Nawayathi

ತ್ಯಾಜ್ಯ ಸಮುದ್ರಕ್ಕೆ ಸೇರಿಸುವ ಕೋಣೆ ನಾಲಾ ನೀರಿಗೆ ತಡೆ?

share with us

ಕಾರವಾರ: 23 ಜನುವರಿ 2020 (ಫಿಕ್ರೋಖಬರ್ ಸುದ್ದಿ)ನಗರದ ತ್ಯಾಜ್ಯವನ್ನು ಸಮುದ್ರಕ್ಕೆ ಸೇರಿಸುವ ಕೋಣೆ ನಾಲಾವನ್ನು ಬಂದರು ಇಲಾಖೆ ಕಡಲ ತೀರದ ನಡುವೆ ತಂದು ಸೇರಿಸುವ ಯೋಜನೆ ಹೊಂದಿದೆ ಎಂದು ಮೀನುಗಾರರು, ಸಾಗರ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಬಂದರು ಇಲಾಖೆ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಅನುಮತಿ ಪಡೆಯಲು ಸಿದ್ಧಪಡಿಸಿದ ಮಾಸ್ಟರ್ ಪ್ಲಾನ್​ನಲ್ಲಿ ಕೋಣೆ ನಾಲಾವನ್ನು ತೋರಿಸಿಯೇ ಇಲ್ಲ. ಯೋಜನೆಯಂತೆ ಕಾಮಗಾರಿ ನಡೆದರೆ ಅದನ್ನು ಬಂದ್ ಮಾಡಬೇಕು. ಇಲ್ಲವೇ ಬೇರೆಡೆ ತಿರುಗಿಸಬೇಕಿದೆ. ಏಕೆಂದರೆ ಬಂದರಿನ ಪ್ರದೇಶದ ನೀರಿನ ಗುಣಮಟ್ಟ ಉತ್ತಮವಾಗಿರಬೇಕು. ಇಲ್ಲದಿದ್ದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಡಗುಗಳು ಇಲ್ಲಿಗೆ ಬರಲು ಒಪ್ಪುವುದಿಲ್ಲ. ಇದರಿಂದ ಬಂದರಿನ ಪ್ರದೇಶದ ಒಳಗೆ ಕೊಳಚೆ ನೀರು ಸೇರಿಸಲು ಸಾಧ್ಯವಿಲ್ಲ. ನೀರನ್ನು ಎಲ್ಲಿ ಬಿಡುತ್ತಾರೆ ಎಂಬ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎನ್ನುತ್ತಾರೆ ಸಾಗರ ವಿಜ್ಞಾನಿ ಡಾ.ವಿ.ಎನ್. ನಾಯಕ, ಬಂದರು ಇಲಾಖೆ ಅಧಿಕಾರಿಗಳ ಜತೆ ಈ ಕುರಿತು ಪ್ರಸ್ತಾಪ ಮಾಡಿದರೆ ನಾವು ಅದನ್ನು ಶುದ್ಧೀಕರಿಸಿ ಬಿಡುವ ತಂತ್ರಜ್ಞಾನ ಅಳವಡಿಸುತ್ತೇವೆ ಎಂದು ಮೌಖಿಕವಾಗಿ ಹೇಳುತ್ತಾರೆ. ಆದರೆ, ಒಂದು ಮೂಲದ ಪ್ರಕಾರ ಅದನ್ನು ತಿರುಗಿಸಿ ಹಾಲಿ ಕಡಲ ತೀರದಲ್ಲಿರುವ ನಗರಸಭೆ ಮಕ್ಕಳ ಉದ್ಯಾನದ ಪಕ್ಕ ತಂದು ಸಮುದ್ರಕ್ಕೆ ಸೇರಿಸಲಾಗುತ್ತದೆ. ಕಾರವಾರ ಕಡಲ ತೀರದ ಮುಖ್ಯ ಭಾಗವೇ ಅದು. ಹೆಚ್ಚಿನ ಪ್ರವಾಸಿಗರು ಜನರು ಬಂರುವ ಅಲ್ಲಿನ ನೀರಿನ ಗುಣಮಟ್ಟ ಕೆಡುತ್ತದೆ ಎಂಬುದು ಮೀನುಗಾರರ ಮುಖಂಡ ರಾಜು ತಾಂಡೇಲ ಆರೋಪ.

ಬಂದರು ಸಚಿವರ ಸಭೆ 31ಕ್ಕೆ: ಬಂದರಿನ ಎರಡನೇ ಹಂತದ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಜ.31 ರಂದು ಬೆಳಗ್ಗೆ 10.30 ಕ್ಕೆ ವಿಕಾಸ ಸೌಧ ಕೊಠಡಿ ಸಂಖ್ಯೆ 318 ರಲ್ಲಿ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆ ಆಯೋಜಿಸಿದ್ದಾರೆ. ಯೋಜನೆ ವಿರೋಧಿಸಿ ಕಳೆದ 9 ದಿನಗಳಿಂದ ಮೀನುಗಾರರು ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಿದ್ದಾರೆ. ಎರಡು ದಿನಗಳಿಂದ ಅಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಧರಣಿ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುತ್ತಿದ್ದಾರೆ. ವಿವಿಧ ಸಂಘಟನೆಗಳು ಮೀನುಗಾರರ ಧರಣಿಗೆ ಕಾಮಗಾರಿ ಮಾಡಲು ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹರೀಶಕುಮಾರ್ ಸಚಿವರ ಕಚೇರಿಗೆ ಪತ್ರ ಬರೆದಿದ್ದರು. ಸಚಿವರ ಆಪ್ತ ಕಾರ್ಯದರ್ಶಿ ಡಾ.ಬಿ. ಉದಯಕುಮಾರ ಶೆಟ್ಟಿ ಈ ಸಂಬಂಧ ದಿನಾಂಕ ನಿಗದಿ ಮಾಡಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಸಭೆಗೆ 20 ಮೀನುಗಾರರು ಬರಲು ಅವಕಾಶವಿದ್ದು, ಬಂದರು ಇಲಾಖೆಯ ಅಧಿಕಾರಿಗಳನ್ನೂ ಕರೆಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا