Urdu   /   English   /   Nawayathi

ಸಿಎಎ ವಾಪಸ್​​​ ಪಡೆಯುವ ಕಾಲ ಬಂದೇ ಬರುತ್ತೆ: ಭೀಮ್​ ಆರ್ಮಿ ಮುಖ್ಯಸ್ಥ​​​

share with us

ನವದೆಹಲಿ: 23 ಜನುವರಿ 2020 (ಫಿಕ್ರೋಖಬರ್ ಸುದ್ದಿ) ರಾಷ್ಟ್ರ ರಾಜಧಾನಿಯಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ಮುಂದುವರೆದಿದ್ದು, ಶಹೀನಾ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭಾಗವಹಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಕ್ಷಿಣ ದೆಹಲಿಯ ಶಹೀನಾ ಬಾಗ್​ನಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಆಜಾದ್, ಜನರ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ದಬ್ಬಾಳಿಕೆ ಮತ್ತು ಹಿಂಸಾತ್ಮಕ ದಾರಿ ಹಿಡಿದಿದೆ. ಸಂವಿಧಾನದ ರಕ್ಷಣೆಗಾಗಿ ದೇಶದ ಮಹಿಳೆಯರಿಂದ ಪ್ರಾರಂಭವಾದ ಈ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ. ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಪ್ರಧಾನಿ ನರೇಂದ್ರ ಮೋದಿ ಹಿಂಪಡೆಯಬೇಕು. ಸಂವಿಧಾನವನ್ನ ಎತ್ತಿ ಹಿಡಿಯಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಶಹೀನಾ ಬಾಗ್ ಪ್ರಾರಂಭಿಸಿದ​ ಈ ಯುದ್ಧ, ಇದೀಗ ಇಡೀ ದೇಶವನ್ನ ವ್ಯಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಈ ಕಾನೂನನ್ನ ಅವರೇ ಹಿಂಪಡೆಯುವ ಕಾಲ ಬಂದೇ ಬರುತ್ತದೆ ಎಂದಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا