Urdu   /   English   /   Nawayathi

ಈಶಾನ್ಯ ಭಾರತದಲ್ಲಿ ಮಹತ್ವದ ಬದಲಾವಣೆ: ಅಸ್ಸೋಂನಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 644 ಉಗ್ರರು!

share with us

ಗುವಹಾಟಿ: 23 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಅಸ್ಸೋಂನಲ್ಲಿ ಇಂದು ಒಟ್ಟು 644 ಉಗ್ರರು 177 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುಎಲ್​ಎಫ್​​ಎ (ಐ), ಎನ್​ಡಿಎಫ್​​ಬಿ, ಆರ್​ಎನ್​ಎಲ್​ಎಫ್​, ಕೆಎಲ್​ಓ, ಸಿಪಿಐ(ಮಾವೋವಾದಿ), ಎನ್​ಎಸ್​ಎಲ್​ಎ, ಎಡಿಎಫ್ ಮತ್ತು ಎನ್​ಎಲ್​ಎಫ್​ಬಿ ಸಂಘಟನೆಯ ಸದಸ್ಯರು, ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣಾಗಿದ್ದಾರೆ. ಇದು ರಾಜ್ಯ ಮತ್ತು ಅಸ್ಸೋಂ ಪೊಲೀಸರಿಗೆ ಮಹತ್ವದ ದಿನವಾಗಿದೆ. ಒಟ್ಟಾರೆಯಾಗಿ 644 ಕಾರ್ಯಕರ್ತರು ಮತ್ತು ಎಂಟು ಉಗ್ರಗಾಮಿ ಗುಂಪುಗಳ ಮುಖಂಡರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತಾ ಸುದ್ದಿಗಾರರಿಗೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಇದು ಉಗ್ರರ ಅತಿದೊಡ್ಡ ಶರಣಾಗತಿ ಎಂದು ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا