Urdu   /   English   /   Nawayathi

ಕಲರ್ ಝೆರಾಕ್ಸ್ ಮಾಡಿ ನೋಟು ಚಲಾವಣೆ ಮಾಡಿದ ಕಿಡಿಗೇಡಿಗಳು: ಕಾರವಾರದ ಕೆಲವರಿಗೆ ಕಹಿ ಅನುಭವ

share with us

ಕಾರವಾರ: 21 ಜನುವರಿ 2020 (ಫಿಕ್ರೋಖಬರ್ ಸುದ್ದಿ) ತಾಲೂಕಿನಲ್ಲಿ ಕಿಡಿಗೇಡಿಗಳು ನೂರು ರೂಪಾಯಿ ಹೊಸ ನೋಟುಗಳನ್ನೇ ನಕಲಿ ಮಾಡಿ ನಗರದಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಹತ್ತು ರೂಪಾಯಿಯಿಂದ ಹಿಡಿದು ಎರಡು ಸಾವಿರ ರೂಪಾಯಿಯವರೆಗೆ ಹೊಸ ನೋಟುಗಳನ್ನ ಮುದ್ರಿಸಿ, ಚಲಾವಣೆಗೆ ಬಿಡಲಾಗಿದೆ ಎಂಬ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದೆ. ಹಲವರಿಗೆ ಕೋಟಾ ನೋಟು ಸಿಕ್ಕಿದ್ದು ಈ ಬಗ್ಗೆ ಕಹಿ ಅನುಭವವಾಗಿದೆ ಎನ್ನುತ್ತಾರೆ ಸ್ಥಳೀಯರು. ನೂರು ರೂಪಾಯಿ ಹೊಸ ನೋಟು ನೇರಳೆ ಬಣ್ಣದ್ದಾಗಿದ್ದು ಕಿಡಿಗೇಡಿಗಳು ನೂರು ರೂಪಾಯಿ ಅಸಲಿ ನೋಟಿನ ಮಾದರಿಯಲ್ಲಿಯೇ ಕಲರ್ ಜೆರಾಕ್ಸ್ ಮಾಡಿಸಿ ಹರಿಬಿಟ್ಟಿದ್ದಾರೆ. ನೋಟಿನ ಮೇಲಿರುವ ಸೆಕ್ಯೂರಿಟಿ ಥ್ರೆಡ್ ಮಾದರಿಯನ್ನ ಸಹ ನಕಲು ಮಾಡಿದ್ದು ಒಮ್ಮೆಲೇ ನೋಟನ್ನು ತೆಗೆದುಕೊಂಡಾಗ ಯಾರಿಗೂ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯದ ರೀತಿಯಲ್ಲಿ ಕೋಟಾ ನೋಟನ್ನು ಮಾಡಿದ್ದಾರೆ ಎನ್ನಲಾಗಿದೆ. ನೂರು ರೂಪಾಯಿಯಾದ ಕಾರಣ ಯಾರೂ ಹೆಚ್ಚಾಗಿ ತಲೆ ಕೆಡೆಸಿಕೊಳ್ಳದೇ ದೂರು ಕೊಡಲು ಮುಂದಾಗುತ್ತಿಲ್ಲ. ನೂರು ರೂಪಾಯಿ ಹೊಸ ನೋಟು ಪಡೆಯುವ ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಚ್ಚರಿಕೆ ಹಾಗೂ ಮಾಹಿತಿಗಾಗಿ ಸತ್ವಾಧಾರದ ಮೂಲಕ ಈ ವರದಿ ಪ್ರಕಟಿಸಲು ಸ್ಥಳೀಯರು ವಿನಂತಿಸಿದ್ದಾರೆ.

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا