Urdu   /   English   /   Nawayathi

ಅಯೋಧ್ಯೆ ಪ್ರಕರಣ: ತೀರ್ಪು ಮರು ಪರಿಶೀಲನೆಗೆ ಪರಿಹಾರಾತ್ಮಕ ಅರ್ಜಿ

share with us

ನವದೆಹಲಿ: 21 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಅಯೋಧ್ಯೆಯ ರಾಮಜನ್ಮಭೂಮಿ–ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್​​​ನ ಸಾಂವಿಧಾನಿಕ ಪೀಠ ನೀಡಿದ ತೀರ್ಪು ಮರು ಪರಿಶೀಲಿಸುವಂತೆ ಕೋರಿ ಜಮಾತ್- ಉಲೇಮಾ-ಇ-ಹಿಂದ್, ಸುನ್ನಿ ವಕ್ಫ್ ಬೋರ್ಡ್ ಮಂಗಳವಾರ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದೆ. ಈಗಾಗಲೇ ಈ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್​​ 9ರಂದು ತೀರ್ಪು ಪ್ರಕಟಗೊಂಡಿದ್ದು, ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸುನ್ನಿ ವಕ್ಫ್ ಬೋರ್ಡ್​​ಗೆ ಪರ್ಯಾಯವಾಗಿ 5 ಎಕರೆ ಜಮೀನು ನೀಡವಂತೆ ತಿಳಿಸಿತ್ತು.

ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಎರಡೂ ಧರ್ಮಗಳು ತೀರ್ಪು ಸ್ವಾಗತಿಸಿದ್ದವು. ಅಲ್ಲದೆ, ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಮತ್ತೆ ಮುಸ್ಲಿಂ ಮುಖಂಡರು ಸಭೆ ನಡೆಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೇ, ಬೇಡವೇ ಎಂಬುದರ ಚರ್ಚೆ ನಡೆಸಿದ್ದರು. ಜಮಾತ್- ಉಲೇಮಾ-ಇ- ಹಿಂದ್, ಸುನ್ನಿ ವಕ್ಫ್ ಬೋರ್ಡ್ ಮುಖಂಡರು ಸುದೀರ್ಘವಾಗಿ ಸಭೆಗಳನ್ನು ನಡೆಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا