Urdu   /   English   /   Nawayathi

ಧರ್ಮ ವಿಭಜನೆಯಿಂದ ಲಾಭ ಪಡೆವ ಹುನ್ನಾರ : ಮಾಜಿ ಸಚಿವ ಬಿ.ರಮಾನಾಥ ರೈ

share with us

ಮಂಗಳೂರು: 19 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಕನಕಪುರದಲ್ಲಿ ಯೇಸುಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಕ್ರೈಸ್ತ ಸಮುದಾಯವನ್ನು ಪ್ರಚೋದಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ. ದ.ಕ ಜಿಲ್ಲೆಯನ್ನು ಮತೀಯ ಪ್ರಯೋಗಾಲಯ ಮಾಡಿದ ಸಂಘಟನೆಯ ನಾಯಕರು ಕನಕಪುರದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಶಾಂತಿ ಹಾಗೂ ಸಹಬಾಳ್ವೆ ಬಯಸುವ ಕ್ರೈಸ್ತ ಸಮುದಾಯವನ್ನು ಕೆರಳಿಸುವುದು ಅವರ ಉದ್ದೇಶ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇಲ್ಲಿನ ಕ್ರೈಸ್ತ ಸಮುದಾಯ ಈ ಹಿಂದೆ ಚರ್ಚ್ ದಾಳಿ ಸಂದರ್ಭದಲ್ಲೂ ಪ್ರಚೋದನೆಗೆ ಒಳಗಾಗದೆ ಶಾಂತಿ, ಸಾಮರಸ್ಯ ಕಾಪಾಡಿತ್ತು. ನ್ಯೂಜೆರ್ಸಿಯಲ್ಲಿ ಚರ್ಚ್ ಇದ್ದ ಸ್ಥಳದಲ್ಲಿ ದೇವಾಲಯ ನಿರ್ಮಿಸಲು ಅವಕಾಶ ನೀಡಲಾಗಿದೆ. ಲಂಡನ್‌ನಲ್ಲಿ ಬಸವಣ್ಣನವರ ವಿಗ್ರಹ ಸ್ಥಾಪಿಸಲಾಗಿದೆ. ಬಹುತ್ವದ, ಜಾತ್ಯತೀಯತೆಯ ಇತಿಹಾಸವುಳ್ಳ ಭಾರತಕ್ಕೆ ಜಗತ್ತಿನಲ್ಲಿ ಗೌರವದ ಸ್ಥಾನ ಇದೆ. ಆದರೆ ಬಿಜೆಪಿ ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸಿ ಗೌರವಕ್ಕೆ ಚ್ಯುತಿ ತರುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ಮೋನಪ್ಪ ಶೆಟ್ಟಿ, ಅಪ್ಪಿ, ದೀಪಕ್ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.

ಕೊಲ್ಲೂರಿನಿಂದ 1 ಕೆ.ಜಿ ಅಕ್ಕಿಯೂ ಬಂದಿಲ್ಲ
ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಸಂಸ್ಥೆಗೆ ಒಂದು ಕೆ.ಜಿ.ಅಕ್ಕಿಯೂ ಬಂದಿಲ್ಲ. ಆದರೆ ಪ್ರತೀ ತಿಂಗಳು 4 ಲಕ್ಷ ರೂ.ಬಂದಿದೆ. ಒಬ್ಬ ವ್ಯಕ್ತಿಯ ಲಾಭಕ್ಕಾಗಿ ಈ ಹಣ ವಿನಿಯೋಗವಾಗಿದೆ. ದೇವಸ್ಥಾನದ ಹಣ ದುರುಪಯೋಗ ಮಾಡುವ ಮೂಲಕ ಅವರು ಸಮಾಜಕ್ಕೆ ಮೋಸ ಮಾಡಿದ್ದಾರೆ. ನೈಜ ಹಿಂದುವಾಗಿ ಅದನ್ನು ನಾನು ತಡೆಹಿಡಿದಿದ್ದೇನೆ. ಆದರೆ ಬಿಜೆಪಿ ಅಪಪ್ರಚಾರ ಮಾಡಿ ಸತ್ಯವನ್ನು ಮರೆಮಾಚಿದ್ದಾರೆ ಎಂದು ರಮಾನಾಥ ರೈ ಹೇಳಿದರು.

ಎಸ್‌ಡಿಪಿಐ ನಿಷೇಧ ಬಗ್ಗೆ ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರದ ಮೇಲೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬಹುದು. ಕಾಂಗ್ರೆಸ್ ಪಕ್ಷದ ನಿಲುವು ಏನೆಂದು ಹಿರಿಯ ಮುಖಂಡರು ಸ್ಪಷ್ಟಪಡಿಸಿದ್ದಾರೆ.
– ಬಿ.ರಮಾನಾಥ ರೈ, ಮಾಜಿ ಸಚಿವ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا