Urdu   /   English   /   Nawayathi

ಅಧಿಕಾರಿಗಳ ದಾಳಿ: ಪ್ಲಾಸ್ಟಿಕ್‌ ಚೀಲ ವಶ

share with us

ಕುಮಟಾ: 19 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಪಟ್ಟಣದ ಗಿಬ್‌ ಸರ್ಕಲ್‌ ಬಳಿಯ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳ ತಂಡ, ಪ್ಲಾಸ್ಟಿಕ್‌ ಚೀಲಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು, ಅಂಗಡಿ ಮಾಲಿಕರಿಗೆ ದಂಡ ವಿಧಿಸಿದ ಘಟನೆ ಶನಿವಾರ ನಡೆದಿದೆ. ಪ್ಲಾಸ್ಟಿಕ್‌ ಚೀಲಗಳ ನಿಷೇಧವಿದ್ದರೂ ಪಟ್ಟಣದ ಹಲವು ಅಂಗಡಿಗಳಲ್ಲಿ ಹೇರಳವಾಗಿ ಪ್ಲಾಸ್ಟಿಕ್‌ ಚೀಲ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟವಾಗುತ್ತಿತ್ತು. ಈ ಕುರಿತಂತೆ ಸರಿಯಾದ ಮಾಹಿತಿ ಪಡೆದ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ ತಂಡ ಗಿಬ್‌ ಸರ್ಕಲ್‌ ಬಳಿಯ 12 ಅಂಗಡಿಗಳ ಮೇಲೆ ದಾಳಿ ನಡೆಸಿ, 35-40 ಕೆ.ಜಿ. ತೂಕದ ಪ್ಲಾಸ್ಟಿಕ್‌ ಚೀಲಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಅಂಗಡಿ ಮಾಲಿಕರಿಗೆ ದಂಡ ವಿ ಧಿಸಿ, ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ಮಾರದಂತೆ ಎಚ್ಚರಿಕೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ., ಅಧಿಕಾರಿಗಳಾದ ಮಹೇಂದ್ರ, ಸಿಬ್ಬಂದಿಗಳಾದ ಸುಧೀರ ಗೌಡ, ಗೋವಿಂದ ಗೌಡ ಸೇರಿದಂತೆ ಇನ್ನಿತರರು ಇದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا