Urdu   /   English   /   Nawayathi

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮೋದಿ-ಶಾ ಮನಪರಿವರ್ತನೆ.. ಸಿ ಎಂ ಇಬ್ರಾಹಿಂ ಆಶಾವಾದ

share with us

ದಾವಣಗೆರೆ: 19 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮನಪರಿರ್ತನೆ ಆಗಬಹುದು ಎಂದು ದಾವಣಗೆರೆಯಲ್ಲಿ ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯಲ್ಲಿ ಮಾತನಾಡಿದ ಅವರು, ಬಸವ ತತ್ವ ಆಧಾರದಲ್ಲೇ ಅಂಬೇಡ್ಕರ್ ಸಂವಿಧಾನ ಇದೆ. ಪೌರತ್ವ ತಿದ್ದುಪಡಿ ವಾಪಸ್​ ಪಡೆಯುವ ವಿಶ್ವಾಸ ಇದೆ. ಸ್ವಾಮೀಜಿಗಳು, ಜನರನ್ನು ಒಂದೆಡೆ ಸೇರಿಸಿ ಸರ್ವಧರ್ಮ ಸಮ್ಮೇಳನ ಮಾಡಿ ಚರ್ಚೆ ನಡೆಸ್ತೇವೆ. ಮೋದಿ, ಅಮಿತ್ ಶಾ ಅವರಿಗೆ ಪ್ರಾರ್ಥನೆ ಮಾಡಲಿದ್ದೇವೆ. ಸಿಎಎ ವಾಪಸ್​ ಪಡೆಯುವ ವಿಶ್ವಾಸ ಇದೆ. ಅವರು ಪರಿವರ್ತನೆ ಆಗಬಹುದು ಎಂದರು. ಹೊರಗಿನಿಂದ ಬಂದವರ ಮಾಹಿತಿಯನ್ನು ಗ್ರಾಮ ಪಂಚಾಯತ್‌,ಪೊಲೀಸ್ ಠಾಣೆಯಲ್ಲಿ ಪಡೆಯಬಹುದು. ಆದರೆ, ಇಲ್ಲೇ ಇದ್ದವರನ್ನು ಕೇಳುವುದು ಸರಿಯಲ್ಲ. ಕರ್ನಾಟಕ ದಲ್ಲಿ ಈ ಸಮಸ್ಯೆ ಬರಲ್ಲ, ಇಲ್ಲಿ ಯಾರೂ ನುಸುಳುಕೋರರು‌ ಇಲ್ಲ. ಈ ಬಗ್ಗೆ ಯೋಚನೆ ಬಿಟ್ಟು, ಅಡ್ವಾಣಿ, ಯಶವಂತ ಸಿನ್ಹ, ಮನಮೋಹನ್ ಸಿಂಗ್ ಅವರಂತವರ ಬಳಿ‌ ಆರ್ಥಿಕ ಸಲಹೆ ಪಡೆದು ಸರಿಯಾದ ರೀತಿ ದೇಶ ನಡೆಸಿಕೊಂಡು ಹೋಗಿ ಎಂದು ಸಲಹೆ ನೀಡಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا