Urdu   /   English   /   Nawayathi

ಮಾನವೀಯತೆ ಮೆರೆದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು.. ವಿಡಿಯೋ ವೈರಲ್

share with us

ಮಂಗಳೂರು: 16 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಸಿಎಎ ಪ್ರತಿಭಟನಾ ಸಮಾವೇಶದ ಕಾವಿನ ಮಧ್ಯೆಯೂ ಮಾನವೀಯತೆ ಮೆರೆದ ಘಟನೆಯೊಂದು ಬೆಂಗಳೂರು - ಮಂಗಳೂರು ರಾ.ಹೆ.75 ರ ರಸ್ತೆಯ ಅಡ್ಯಾರ್-ಕಣ್ಣೂರು ಬಳಿ ನಡೆದಿದೆ. ನಗರದ ಹೊರವಲಯದ ಅಡ್ಯಾರ್-ಕಣ್ಣೂರಿನಲ್ಲಿ ಬುಧವಾರ ನಡೆದ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಲಕ್ಷಕ್ಕೂ ಅಧಿಕ ಮಂದಿ ರಸ್ತೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಈ ಜನಸಂದಣಿಯ ನಡುವೆ ಸಿಕ್ಕಿ ಹಾಕಿಕೊಂಡಿದೆ, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ರಿಕ್ಷಾ ಮುಂದೆ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮ ರಿಕ್ಷಾದೊಳಗಿದ್ದ ಗರ್ಭಿಣಿಯು ಸಾಕಷ್ಟು ಪ್ರಯಾಸ ಪಡುತ್ತಿದ್ದರು. ಇದನ್ನು ಗಮನಿಸಿದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು, ಒಂದು ರಸ್ತೆಯಲ್ಲಿದ್ದ ಆಟೊರಿಕ್ಷಾವನ್ನು ಡಿವೈಡರ್​ನ ಆಚೆ ರಸ್ತೆಗೆ ಎತ್ತಿಟ್ಟು ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಾನವೀಯತೆ ಮೆರೆದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು 21 ಸೆಕೆಂಡ್ ಇರುವ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا