Urdu   /   English   /   Nawayathi

ಗೋಲಿಬಾರ್‌ನಲ್ಲಿ ಇಬ್ಬರನ್ನು ಕೊಂದ ಪೊಲೀಸರನ್ನು ಕ್ಷಮಿಸಲು‌ ಸಾಧ್ಯವಿಲ್ಲ: ಸುಧೀರ್ ಕುಮಾರ್ ಮರೋಳಿ

share with us

ಮಂಗಳೂರು: 16 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಸರ್ಕಾರ ಕೋವಿ ಕೊಟ್ಟಿದೆ ಎಂದು ಗುಂಡು ಹಾರಿಸಿದ ಇನ್​ಸ್ಪೆಕ್ಟರ್ ಶಾಂತಾರಾಂ, ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಇನ್ಸ್‌ಸ್ಪೆಕ್ಟರ್ ಷರೀಫ್ ಅವರೇ, ಅವಿಭಜಿತ ದ.ಕ.ಜಿಲ್ಲೆಯವರು ನಿಮ್ಮನ್ನು ಅಷ್ಟು ಸುಲಭವಾಗಿ ಬಿಡೋದಿಲ್ಲ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಹೇಳಿದರು. ಸಿಎಎ ವಿರೋಧಿಸಿ ನಗರದ ಅಡ್ಯಾರ್-ಕಣ್ಣೂರಿನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಡಿ.19 ರಂದು ಪೊಲೀಸ್ ಗೋಲಿಬಾರ್​ಗೆ ಮಡಿದ ಜಲೀಲ್ ಕಂದಕ್ ಮತ್ತು ನೌಶೀನ್ ಕುದ್ರೋಳಿಯವರನ್ನು ನೆನಪಿಸಿ ಮಾತನಾಡಿದ ಅವರು, ನಾನಿರುವವರೆಗೂ ಒಬ್ಬನೇ ಒಬ್ಬ ಮುಸ್ಲಿಮ್ ಸಮುದಾಯದ ವ್ಯಕ್ತಿಗೂ ಏನಾಗುವುದಿಲ್ಲವೆಂದು ಯಡಿಯೂರಪ್ಪನವರು ಹೇಳುತ್ತಾರೆ. ನೀವು ಹಾಗೂ ಶೋಭಾ ಕರಂದ್ಲಾಜೆ ಬಿಜೆಪಿ ಬಿಟ್ಟು ಹೋದ ಮೇಲೆ ಶಹೀದ್ ಟಿಪ್ಪು ಸುಲ್ತಾನ್ ಅಂದಿದ್ರು. ಟಿಪ್ಪು ಸುಲ್ತಾನ್ ಅಮರ್ ರಹೇ ಅಂದ್ರಿ. ಆದರೆ ಬಿಜೆಪಿ ಸೇರಿದ ಕೂಡಲೇ ಟಿಪ್ಪುಸುಲ್ತಾನ್ ಮತಾಂಧ ಅಂದ್ರಿ. ನಿಮ್ಮನ್ನು ನಂಬಿ ಜನ ಇದ್ರೆ ನೇತ್ರಾವತಿ ನದಿಗೆ ಬಿದ್ದು ಸಾಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 'ವಿ ದ ಪೀಪಲ್ ಆಫ್ ಇಂಡಿಯಾ' ಅಂತ ಹೇಳುವ ಸಂವಿಧಾನದ ಪೀಠಿಕೆ, ವಿಧಿ ವಿಧಾನಗಳು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಜಾರಿಯಲ್ಲಿ ಇರುವವರೆಗೆ ಒಬ್ಬನೇ ಒಬ್ಬ ಮುಸ್ಲಿಮನನ್ನು, ಹಿಂದೂವನ್ನು ಈ ದೇಶದಿಂದ ಹೊರಕಳಿಸಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳ ವಿರುದ್ಧ ಜನಜಾಗೃತಿ ನಡೆಸುತ್ತಿದ್ದೇವೆ ಎಂದರು. ಬಿಜೆಪಿ ಅಧಿಕಾರದಲ್ಲಿರುವ ಅಸ್ಸೋಂ, ಉತ್ತರ ಪ್ರದೇಶ, ಕರ್ನಾಟಕದಲ್ಲಿ ಗೋಲಿಬಾರ್ ನಡೆಸಲಾಗುತ್ತಿದೆ. ಪ್ರತಿಭಟನೆ ಮಾಡುವುದು ದೇಶದ ಜನರ ಹಕ್ಕು. ಪ್ರಶ್ನೆ ಮಾಡಲು ಜನಪ್ರತಿನಿಧಿಗಳು ಯಾರೆಂದು ಸುಪ್ರೀಂಕೋರ್ಟ್ ನ್ಯಾಯಧೀಶರು ಪ್ರಶ್ನಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಯಾರೂ ಯೋಗಿ ಎಂದು ಕರೆಯಬೇಕಾಗಿಲ್ಲ. ಅವರು ಅಯೋಗ್ಯ ಆದಿತ್ಯನಾಥ್ ಎಂದು ಸುಧೀರ್ ಕುಮಾರ್ ಮರೋಳಿ ಛೇಡಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا