Urdu   /   English   /   Nawayathi

ಪೊಲೀಸರು ನಮ್ಮನ್ನು ಕ್ರಿಮಿನಲ್ ಗಳ ರೀತಿ ನಡೆಸಿಕೊಂಡರು: ಜಾಮಿಯಾ ವಿ.ವಿ ವಿದ್ಯಾರ್ಥಿಗಳು

share with us

ನವದೆಹಲಿ: 15 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದ್ದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ ವೇಳೆ ಹಲವು ಹಿಂಸಾತ್ಮಕ ಘಟನೆಗಳು ನಡೆದಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗಳು ಪೊಲೀಸರು ನಮ್ಮನ್ನು ಕ್ರಿಮಿನಲ್ ಗಳ ರೀತಿ ನಡೆಸಿಕೊಂಡರು ಎಂದು ಆರೋಪಿಸಿದ್ದಾರೆ. ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ತಳ್ಳಿದ್ದು ಈ ವೇಳೆ ಮಹಿಳಾ ಪೊಲೀಸರು ಇರಲಿಲ್ಲ ಎಂದಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಅದು ಹಿಂಸಾತ್ಮಕ ರೂಪಕ್ಕೆ ತಿರುಗಿ ವಿದ್ಯಾರ್ಥಿಗಳು, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 40 ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು 4 ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಲ್ಲದೆ ಎರಡು ಪೊಲೀಸ್ ವಾಹನಗಳು ಸುಟ್ಟುಹೋಗಿವೆ. ಜನಸಮೂಹವನ್ನು ಚದುರಿಸಲು ಪೊಲೀಸರು ಆಶ್ರುವಾಯು ಬಳಸಬೇಕಾಯಿತು, ಈ ಸಂದರ್ಭದಲ್ಲಿ ಹಲವರು ಬಂಧನಕ್ಕೊಳಗಾದರು. ಕ್ಯಾಂಪಸ್ ತೊರೆದು ಕೈಮೇಲೆತ್ತಿ ಬನ್ನಿ ಎಂದು ನಮಗೆ ಹೇಳಲಾಯಿತು,ನಾವು ಪ್ರತಿಭಟನೆ ನಡೆದ ಸ್ಥಳದಲ್ಲಿ ಇರಲೂ ಇಲ್ಲ. ಕ್ಯಾಂಪಸ್ ಒಳಗೆ ಇದ್ದೆವು. ಪೊಲೀಸರು ನಮ್ಮನ್ನು ಕ್ರಿಮಿನಲ್ ಗಳ ರೀತಿ ನಡೆಸಿಕೊಂಡರು ಎಂದು ವಿದ್ಯಾರ್ಥಿನಿಯೊಬ್ಬರು ಹೇಳುತ್ತಾರೆ. ವಿಶ್ವವಿದ್ಯಾಲಯದೊಳಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರನ್ನು ಕೂಡ ಪೊಲೀಸರು ಬಿಡಲಿಲ್ಲ. ಮಸೀದಿಯೊಳಗೆ ಪೊಲೀಸರು ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರಿಗೆ ಕಿರುಕುಳ ನೀಡಿದರು. ನಮ್ಮ ಲೈಬ್ರೆರಿ, ಕ್ಯಾಂಟೀನ್ ಗಳನ್ನು ನಾಶ ಮಾಡಿದ್ದಲ್ಲದೆ ಬೇರೆ ಎಷ್ಟು ವಿಭಾಗಗಳು ಹಾನಿಯಾಗಿವೆ ಎಂದು ನಮಗೆ ಗೊತ್ತಿಲ್ಲ, ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೂಡ ನೀಡಲಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ನಿನ್ನೆಯ ಪ್ರತಿಭಟನೆ, ಹಿಂಸಾಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಸೊಸ್ ಜಾಮಿಯಾ ಎಂದು ಹ್ಯಾಶ್ ಟಾಗ್ ಹಾಕಿ ನಿನ್ನೆಯ ಘಟನೆಯ ಫೋಟೋ ಮತ್ತು ವಿಡಿಯೊಗಳನ್ನು ಹಲವರು ಶೇರ್ ಮಾಡುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا