Urdu   /   English   /   Nawayathi

ಇಕ್ಕಟ್ಟಿನಲ್ಲಿ ಮೋದಿ ಸರ್ಕಾರ: 3 ವರ್ಷಗಳ ಗರಿಷ್ಠ ಮಟ್ಟಕ್ಕೇರಿದ ಚಿಲ್ಲರೆ ಹಣದುಬ್ಬರ

share with us

ನವದೆಹಲಿ: 12 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಆಹಾರ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದರಿಂದ ನವೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರವು ಶೇ. 5.54ರಷ್ಟು ಏರಿಕೆ ಮೂಲಕ 3 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಇಂದು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಅನ್ವಯ, ಅಕ್ಟೋಬರ್​ನಲ್ಲಿದ್ದ ಶೇ. 4.62ರಷ್ಟು ದರಕ್ಕಿಂತ ಹೆಚ್ಚಳವಾಗಿದೆ. 2016 ಜುಲೈನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ದರವು ಶೇ. 6.07ರಷ್ಟು ಇತ್ತು. ಮೂರು ವರ್ಷಗಳ ಬಳಿಕ ಮತ್ತೆ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ. ಮಾಂಸ ಮತ್ತು ಮೀನು ಸೇರಿದಂತೆ ಹಲವು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರವು ಏರು ಗತಿಯಲ್ಲಿ ಸಾಗುತ್ತಿದೆ. ಅಡಿಗೆ ಬಜೆಟ್​ನ ಬೆಲೆಗಳನ್ನು ಅಳೆಯುವ ಮಾಪನವಾಗಿರುವ ಆಹಾರದ ಬೆಲೆಗಳು ನವೆಂಬರ್‌ನಲ್ಲಿ ಶೇ. 10.01 ರಷ್ಟು ಏರಿಕೆಯಾಗಿದ್ದು, ಅಕ್ಟೋಬರ್‌ನಲ್ಲಿ ಇದು ಶೇ. 7.89 ರಷ್ಟಿತ್ತು. ಧಾನ್ಯ ಮತ್ತು ಉತ್ಪನ್ನಗಳಲ್ಲಿನ ಹಣದುಬ್ಬರ ದರವು ತಿಂಗಳ ಹಿಂದಿನ ಶೇ. 2.16ಕ್ಕೆ ಹೋಲಿಸಿದರೆ ಶೇ. 3.71ಕ್ಕೆ ಏರಿಕೆಯಾಗಿದೆ. ಅಕ್ಟೋಬರ್​ನಲ್ಲಿ ಶೇ. 26ರಷ್ಟಿದ್ದ ತರಕಾರಿಗಳ ಹಣದುಬ್ಬರವು ನವೆಂಬರ್​ನಲ್ಲಿ ಶೇ. 36ರಷ್ಟು ಆಗಿದೆ.

Retail inflation

ಚಿಲ್ಲರೆ ಹಣದುಬ್ಬರ

ದ್ವಿದಳ ಧಾನ್ಯಗಳು ಮತ್ತು ಉತ್ಪನ್ನಗಳು ನವೆಂಬರ್‌ನಲ್ಲಿ ಶೇ. 13.94ರಷ್ಟು ಹಣದುಬ್ಬರ ದಾಖಲಿಸಿದ್ದು, ಅಕ್ಟೋಬರ್‌ನಲ್ಲಿ ಇದು ಶೇ. 11.72 ರಷ್ಟು ಇತ್ತು. ಹಣದುಬ್ಬರವನ್ನು ನಿಯಂತ್ರಿಸಲು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್​ನಲ್ಲಿ ನಡೆದ ಹಣಕಾಸು ಪರಾಮರ್ಶೆ ಸಭೆಯಲ್ಲಿ ಇದೇ ಪ್ರಥಮ ಬಾರಿಗೆ ರೆಪೋ ದರವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿತ್ತು. ಚಿಲ್ಲರೆ ಹಣದುಬ್ಬರವು ಆರ್ಥಿಕತೆ ಅಂಶಗಳಲ್ಲಿ ಪ್ರಮುಖವಾಗಿದ್ದು, ಇದರ ಮೇಲೆ ಆರ್‌ಬಿಐ ಸತತ ನಿಗಾ ಇಟ್ಟಿರುತ್ತದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا