Urdu   /   English   /   Nawayathi

ಭಟ್ಕಳ ಕುಂಟವಾಣಿಯಲ್ಲಿ ಚಿರತೆ ಕಳೇಬರ ಪತ್ತೆ: ಮದ್ದು ಹಾಕಿ ಕೊಂದಿರುವ ಶಂಕೆ

share with us

ಭಟ್ಕಳ: 11 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಮಾರುಕೇರಿ ಪಂಚಾಯತಿ ವ್ಯಾಪ್ತಿಯ ಸರ್ವೇ ನಂ. 18 ರ ಅರಣ್ಯ ಜಾಗದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಚಿರತೆ ಮರಿಯ ಶವ ಪತ್ತೆಯಾಗಿದೆ. ಸಾವನ್ನಪ್ಪಿದ್ದ ಚಿರತೆ ಮರಿ ಅಂದಾಜು 1.5 ಅಥವಾ 2 ವರ್ಷದಾಗಿದೆ. ಮಂಗಳವಾರ ತಡರಾತ್ರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸತ್ತ ಪ್ರಾಣಿಯ ವಾಸನೆ ಸ್ಥಳೀಯರ ಗಮನಕ್ಕೆ ಬಂದಿದ್ದು, ರಾತ್ರಿಯೇ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿರತೆ ಮರಿಯ ಮರಣೋತ್ತರ ಪರೀಕ್ಷೆಯ ಹಿನ್ನೆಲೆ ರಾತ್ರಿಯಿಡೀ ಅರಣ್ಯ ಸಿಬ್ಬಂದಿ ಕಾದು ಬುಧವಾರ ಬೆಳಗ್ಗೆ ಪಶು ಇಲಾಖೆ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಈ ವೇಳೆ ಸತ್ತ ಚಿರತೆ ಮರಿಯು ಸಂಪೂರ್ಣ ಕೊಳೆತಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸದೇ ಸ್ಥಳದಲ್ಲಿಯೇ ಚಿರತೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಟ್ಟಿದ್ದಾರೆ. ಈ ಬಗ್ಗೆ ವಲಯ ಅರಣ್ಯ ಇಲಾಖೆ ಅಧಿಕಾರಿ ಸವಿತಾ ದೇವಾಡಿಗ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ತನಿಖೆಯನ್ನು ಎಸಿಎಫ್ ಸುದರ್ಶನ್​ ನಡೆಸುತ್ತಿದ್ದು, ಕಾಡು ಪ್ರಾಣಿಯಾದ ಹಿನ್ನೆಲೆ ವೈಲ್ಡ್ ಲೈಫ್​ ಕಾಯ್ದೆಯಡಿಯಲ್ಲಿ ತನಿಖೆ ನಡೆಸಲಿದ್ದಾರೆ. ಸದ್ಯಕ್ಕೆ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲದ ಕಾರಣ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.

ಸಹಜವೋ, ಅನುಮಾನಾಸ್ಪದವೋ.? ಸಾಕಷ್ಟು ತಿಂಗಳಿನಿಂದ ಮಾರುಕೇರಿ, ಕೋಣಾರ, ಹಾಡುವಳ್ಳಿ ವ್ಯಾಪ್ತಿಯಲ್ಲಿ ಚಿರತೆಯ ಓಡಾಟಕ್ಕೆ ಸ್ಥಳೀಯರು ಕಂಗಾಲಾಗಿದ್ದರು. ಕೆಲವು ಕಡೆ ದನಕರುಗಳ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿರುವ ಘಟನೆಯಿಂದ ಜನರು ಬೇಸತ್ತಿದ್ದರು. ಆದರೆ ಸತ್ತ ಚಿರತೆ ಮರಿ ಮೇಲೆ ಯಾವ ಗಾಯವೂ ಕಂಡುಬಂದಿಲ್ಲ. ಹಾಗಾಗಿ ಇದು ಸಹಜವೋ ಅಸಹಜವೋ ಇನ್ನೂ ಗೊತ್ತಾಗಿಲ್ಲ. ಚಿರತೆಗಳಿಂದ ಬೇಸತ್ತ ರೈತರು ಯಾವುದಾದರೂ ಔಷಧ ಹಾಕಿ ಅದನ್ನು ಕೊಂದಿರಬಹುದಾ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا