Urdu   /   English   /   Nawayathi

ದಿನೆ ದಿನೇ ಹೆಚ್ಚುತ್ತಿರುವ ಸೈಬರ್​ ಕ್ರೈಂ ಪ್ರಕರಣಗಳು: ಆತಂಕದಲ್ಲಿ ಸಿಲಿಕಾನ್​ ಸಿಟಿ ಜನ

share with us

ಬೆಂಗಳೂರು: 11 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸಿಲಿಕಾನ್ ಸಿಟಿಯಲ್ಲಿ ಸೈಬರ್ ಖದೀಮರ ಹಾವಳಿ ಮಿತಿ ಮೀರಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದ್ರೆ 2019 ರಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಜನರನ್ನು ಆತಂಕಕ್ಕೀಡು‌‌ ಮಾಡಿದೆ.

2017, 2018, 2019 ರ ಸೈಬರ್​ ಕ್ರೈಂ ಪ್ರಕರಣಗಳು :

  • ಡೆಬಿಟ್, ಕ್ರೆಡಿಟ್ ಕಾರ್ಡ್ - 2017 ರಲ್ಲಿ 880, 2018 ರಲ್ಲಿ 2,446, 2019 ರಲ್ಲಿ 3,745
  • ಉದ್ಯೋಗ ವಂಚನೆ - 2017 ರಲ್ಲಿ 172, 2018 ರಲ್ಲಿ 382, 2019 ರಲ್ಲಿ 482
  • ಎಟಿಎಂ ಕಾರ್ಡ್ ದುರ್ಬಳಕೆ - 2017 ರಲ್ಲಿ 395, 2018 ರಲ್ಲಿ 663, 2019 ರಲ್ಲಿ 2,414
  • ಮ್ಯಾಟ್ರಿಮೋನಿಯಲ್ ದೋಖಾ - 2017 ರಲ್ಲಿ 20, 2018 ರಲ್ಲಿ 45, 2019 ರಲ್ಲಿ 80
  • ಬ್ಯುಸಿನೆಸ್ ‌ವಿಚಾರದಲ್ಲಿ ದೋಖಾ - 2017 ರಲ್ಲಿ 60, 2018 ರಲ್ಲಿ 68, 2019 ರಲ್ಲಿ 142
  • ಗಿಫ್ಟ್, ಓಎಲ್​ಎಕ್ಸ್ - 2017 ರಲ್ಲಿ 290, 2018 ರಲ್ಲಿ 945, 2019 ರಲ್ಲಿ 2052
  • ಲಾಟ್ರಿ ಫ್ರಾಡ್ - 2017 ರಲ್ಲಿ 53, 2018 ರಲ್ಲಿ 53, 2019 ರಲ್ಲಿ 87
  • ಸಿಮ್ ಸ್ಕ್ಯಾಮ್ - 2017 ರಲ್ಲಿ 7, 2018 ರಲ್ಲಿ 5, 2019 ರಲ್ಲಿ 1
  • ಸಾಮಾಜಿಕ ಜಾಲ ತಾಣ ದುರ್ಬಳಕೆ - 2017 ರಲ್ಲಿ 70, 2018 ರಲ್ಲಿ 133, 2019 ರಲ್ಲಿ 270
  • ಇಮೇಲ್ ಹ್ಯಾಕ್ - ‌‌ 2017 ರಲ್ಲಿ 59, 2018 ರಲ್ಲಿ 31, 2019 ರಲ್ಲಿ 56
  • ಇತರೆ - 2017 ರಲ್ಲಿ 17, 2018 ರಲ್ಲಿ 265, 2019 ರಲ್ಲಿ 642
  • ಒಟ್ಟು - 2017 ರಲ್ಲಿ 2,023, 2018 ರಲ್ಲಿ 5036, 2019 ರಲ್ಲಿ 9971

    ಬೆಂಗಳೂರಿನಲ್ಲಿ  ಸೈಬರ್​ ಕ್ರೈಂ ಪ್ರಕರಣಗಳು, Cyber crime in Bangalore

ಬೆಂಗಳೂರಿನಲ್ಲಿ ಸೈಬರ್​ ಕ್ರೈಂ ಪ್ರಕರಣಗಳು

2017-18 ಕ್ಕೆ ಹೋಲಿಸಿದರೆ ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನೆ ದಿನೇ ಹೆಚ್ಚಾಗ್ತಿವೆ. ಮತ್ತೊಂದೆಡೆ ನಗರದಲ್ಲಿ ಒಂದೇ ಒಂದು ಸೈಬರ್ ಠಾಣೆ ಇದ್ದು, ಯಾವುದೇ ಸೈಬರ್ ಅಪರಾಧ ಪ್ರಕರಣಗಳು ಕಂಡು ಬಂದರೂ ಜನ ನಗರ ಆಯುಕ್ತ ಕಚೇರಿಯ ಸೈಬರ್​ ಠಾಣೆಗೆ ತೆರಳಿ ದೂರು ನೀಡಬೇಕು. ಇಷ್ಟೊಂದು ಪ್ರಕರಣಗಳನ್ನ ಪತ್ತೆ ಹಚ್ಚಲು ಸಿಬ್ಬಂದಿ ಕೊರತೆ ಸಹ ಇದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا