Urdu   /   English   /   Nawayathi

ಉದ್ಯೋಗಿ ಸ್ನೇಹಿ ಕಂಪೆನಿಯಲ್ಲಿ ಫೇಸ್​ಬುಕ್, ಗೂಗಲ್​ ಭಾರಿ ಕುಸಿತ..! ಅಮೇಜಾನ್ ಇಲ್ಲದ ಪಟ್ಟಿಯಲ್ಲಿ ಈ ಕಂಪೆನಿಗೆ ಅಗ್ರಪಟ್ಟ

share with us

ಸ್ಯಾನ್ ಫ್ರಾನ್ಸಿಸ್ಕೋ: 11 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜಾಗತಿಕ ಟೆಕ್ ದೈತ್ಯಗಳಾದ ಫೇಸ್​ಬುಕ್ ಹಾಗೂ ಗೂಗಲ್​​ ಉದ್ಯೋಗಿ ಸ್ನೇಹಿ ಕಂಪೆನಿಗಳ ಪಟ್ಟಿಯಲ್ಲಿ ಅಗ್ರ ಹತ್ತರಿಂದ ಕೆಳಕ್ಕಿಳಿದಿವೆ. ಗ್ಲಾಸ್​ಡೋರ್​​​​ನ ವಾರ್ಷಿಕ ವರದಿ ಮಂಗಳವಾರ ಬಿಡುಗಡೆಯಾಗಿದ್ದು, ಉದ್ಯೋಗಿ ಸ್ನೇಹಿ ಕಂಪೆನಿಗಳ ಪಟ್ಟಿಯಲ್ಲಿ ಮುಂಚೂಣಿ ಕಂಪೆನಿಗಳು ಕುಸಿತ ಕಂಡಿವೆ. ಕಳೆದ ಮೂರು ವರ್ಷಗಳಿಂದ ಅಗ್ರಹತ್ತರಲ್ಲಿ ಕಾಣಿಸಿಕೊಮಡಿದ್ದ ಫೇಸ್​ಬುಕ್ 23ನೇ ಸ್ಥಾನಕ್ಕೆ ಕುಸಿತವಾಗಿದೆ. ಗೂಗಲ್​​ ಕಳೆದ ಎಂಟು ವರ್ಷದಿಂದ ಅಗ್ರಹತ್ತರಲ್ಲಿ ಸ್ಥಾನ ಕಾಯ್ದುಕೊಂಡಿತ್ತು. ಆದರೆ ಈ ವರ್ಷದ ವರದಿಯಲ್ಲಿ 11ನೇ ಸ್ಥಾನಕ್ಕೆ ಜಾರಿದೆ. ಅಗ್ರ 25ರಲ್ಲಿ ಇದ್ದ ಆ್ಯಪಲ್ ಸಂಸ್ಥೆ ಈ ಬಾರಿ 84ನೇ ಶ್ರೇಯಾಂಕದಲ್ಲಿದೆ. ಧನಾತ್ಮಕ ಆಂತರಿಕ ವಾತಾವರಣದ ಕೊರತೆ ಹೊಂದಿರುವ ಅಮೇಜಾನ್ ಸಂಸ್ಥೆ ಈ ಪಟ್ಟಿಯಲ್ಲಿಲ್ಲ ಎನ್ನುವುದು ಗಮನಾರ್ಹ..! ಕ್ಲೌಡ್ ಕಂಪ್ಯೂಟಿಂಗ್ ಸಾಫ್ಟ್​​ವೇರ್ ಕಂಪೆನಿ ಹಬ್​ಸ್ಪಾಟ್​ ಈ ಬಾರಿ ಉದ್ಯೋಗಿ ಸ್ನೇಹಿ ಕಂಪೆನಿಗಳ ಲಿಸ್ಟ್​​ನಲ್ಲಿ ಅಗ್ರಸ್ಥಾನ ಪಡೆದಿದೆ. ಬ್ರೈನ್ & ಕಂಪೆನಿ ಹಾಗೂ ಡಾಕ್ಯುಸೈನ್​​ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದೆ.

hubspot

ಹಬ್​​ಸ್ಪಾಟ್ ಕಚೇರಿ

ಆಯಾ ಕಂಪೆನಿಯ ಉದ್ಯೋಗಿಗಳು ತಮ್ಮ ಸಂಸ್ಥೆಯ ನಿರ್ಧಾರ, ಸೌಲಭ್ಯ, ಕೆಲಸದ ಒತ್ತಡ, ಉದ್ಯೋಗಿಗಳ ನಡುವಿನ ಸಂಬಂಧ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ನೀಡಿದ ಪ್ರತಿಕ್ರಿಯೆನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا