Urdu   /   English   /   Nawayathi

ಜನವಿರೋಧಿ ನೀತಿ ವಿರೋಧಿಸದಿರುವುದು ದೇಶದ್ರೋಹ.. ನಿವೃತ್ತ ಐಎಎಸ್‌ ಕಣ್ಣನ್ ಗೋಪಿನಾಥ್

share with us

ಮಂಗಳೂರು: 10 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಮ್ಮನ್ನು ಆಳುವ ಸರ್ಕಾರ ಜನವಿರೋಧಿಯಾದಲ್ಲಿ‌ ಅದನ್ನು ಕಾನೂನು, ಸಾರ್ವಜನಿಕರು, ವಿರೋಧ ಪಕ್ಷಗಳು ಖಂಡಿತಾ ವಿರೋಧಿಸಬೇಕು‌. ಸಂವಿಧಾನದಲ್ಲಿ ಎಲ್ಲರಿಗೂ ಈ ಅವಕಾಶ ಇದೆ. ಇದನ್ನು ಯಾರಾದರೂ ವಿರೋಧಿಸದಿದ್ದಲ್ಲಿ ಖಂಡಿತಾ ಅವರು ದೇಶದ್ರೋಹಿಯಾಗುತ್ತಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ಹೇಳಿದರು. ನಗರದ ಎಸ್​ಡಿಎಂ ಕಾಲೇಜಿನಲ್ಲಿ‌ ನಡೆದ ಹ್ಯುಮಾನೋ-2019 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಗರಿಕರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು. ಈ ಬಗ್ಗೆ ಮಾತನಾಡದಿದ್ದಲ್ಲಿ ಮುಂದೆ ತಮ್ಮ ಹಕ್ಕಿನ ಬಗ್ಗೆ ಮಾತನಾಡುವುದನ್ನೇ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ಇಂದು ಯಾರೂ ದೇಶದ ಬಗ್ಗೆ ಚಿಂತನೆ ಮಾಡುತ್ತಿಲ್ಲ.‌ ದೇಶದಲ್ಲಿ ಏನೇ ನಡೆದರೂ ಎಲ್ಲವೂ ಸರಿ ಎಂದು ನಾಗರಿಕರು ಸುಮ್ಮನೆ ಇರುತ್ತಾರೆ, ಅದಕ್ಕೆ ಪ್ರೋತ್ಸಾಹ ನೀಡುತ್ತಾರೆ. ನಾನು ದೇಶಕ್ಕೋಸ್ಕರ ಹೋರಾಟ ಮಾಡುವ ಸಂಕಲ್ಪ ತೊಟ್ಟ ಕಾರಣ ನನ್ನ ಐಎಎಸ್ ಹುದ್ದೆಯನ್ನು ತೊರೆದೆ ಎಂದರು. ಕಾಶ್ಮೀರದಲ್ಲಿ ಯಾವುದೇ ಕಾರಣ ಇಲ್ಲದೆ ಜೈಲು ಪಾಲಾಗುತ್ತಾರೆ. ಅಲ್ಲದೆ ಯಾವ ಕಾರಣಕ್ಕೆ ಅವರು ಜೈಲು ಪಾಲಾಗಿದ್ದಾರೆ ಎಂದು ತಿಳಿಯಲು 15 ದಿನ ಕಳೆಯುತ್ತದೆ. ಇಂದು ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ಬೆಂಬಲಿಸುವವರು ರಾಷ್ಟ್ರೀಯ ವಾದಿಗಳಾಗುತ್ತಾರೆ‌, ಅದನ್ನು ವಿರೋಧಿಸುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ನೋಟು ಅಮಾನ್ಯೀಕರಣದಿಂದ ತೊಂದರೆ ಆಗಿದೆ ಎಂದು ಹೇಳಲು ನಾಗರಿಕರು ಹಿಂದೇಟು ಹಾಕುತ್ತಾರೆ. ಈ ರೀತಿ ಮಾತನಾಡದೆ ಸುಮ್ಮನಿರುವುದು ಕೂಡಾ ದೇಶದ್ರೋಹವೇ ಎಂದು ಕಣ್ಣನ್ ಗೋಪಿನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا