Urdu   /   English   /   Nawayathi

ಮಂಗಳೂರಿನಿಂದ ಹೈದರಾಬಾದ್​​ಗೆ ಅಂಬಾರಿ ಡ್ರೀಮ್​ ಕ್ಲಾಸ್​ ಬಸ್​ ಸೇವೆ ಆರಂಭ

share with us

ಮಂಗಳೂರು: 10 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆ್ಯಕ್ಸಲ್ ಎಸಿ ಸ್ಲೀಪರ್ ಬಸ್ ಗೆ ದ‌.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು‌. ಈ ಬಸ್ ಮಂಗಳೂರು-ಹೈದರಾಬಾದ್ ನಡುವೆ ಸಂಚರಿಸಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ವಿಶಾಲವಾದ ಕಿಟಕಿ, ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಷನ್, ಪರಿಣಾಮಕಾರಿ ಹವಾನಿಯಂತ್ರಕಗಳನ್ನು ಹೊಂದಿದೆ. ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹೈದರಾಬಾದ್ ಗೆ ಅಂಬಾರಿ ಡ್ರೀಮ್​ ಕ್ಲಾಸ್ ಬಸ್ಸಿಗೆ ಇಂದು ಚಾಲನೆ ನೀಡಲಾಗಿದೆ. ಇದರಿಂದ ಹೈದರಾಬಾದ್ ಮಂಗಳೂರು ನಡುವೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸುಸಜ್ಜಿತ, ಹವಾನಿಯಂತ್ರಿತ ಬಸ್ ಇದಾಗಿದ್ದು, ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ದೊರೆಯಲಿದೆ. ಮಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಇನ್ನಷ್ಟು ಬಸ್ ಗಳನ್ನು ಬಿಡಬೇಕೆನ್ನುವ ಬೇಡಿಕೆ ಇದೆ. ಅದೆಲ್ಲವನ್ನೂ ಪರಿಶೀಲನೆ ಮಾಡಿ ಜನರ ಅನುಕೂಲಕ್ಕಾಗಿ ಕೆಎಸ್ ಆರ್​ಟಿಸಿ ಬಸ್ ಗಳನ್ನು ಹೆಚ್ಚು ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದರು. ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಈ ವೋಲ್ವೋ ಡ್ರೀಮ್​​ ಕ್ಲಾಸ್ ಮಲ್ಟಿ ಎಕ್ಸೆಲ್ ಬಸ್ ಅತ್ಯಾಧುನಿಕವಾದ ನೂತನ ತಂತ್ರಜ್ಞಾನವನ್ನು ಒಳಗೊಂಡಿದೆ. ಜನರು 1,400 ರೂ.ನಲ್ಲಿ ಮಂಗಳೂರಿನಿಂದ ಹೈದರಾಬಾದ್​ಗೆ ಪ್ರಯಾಣಿಸಬಹುದು. ಇದು ಪ್ರತಿದಿನ ಮಧ್ಯಾಹ್ನ 3ಕ್ಕೆ ಇಲ್ಲಿಂದ ಹೊರಟು ಮರುದಿನ ಸಂಜೆ 5ಗಂಟೆಗೆ ಮರು ಪ್ರಯಾಣಿಸಲಿದೆ. ಈ ಮೂಲಕ ನಮ್ಮ ಸರ್ಕಾರ ಕೆಎಸ್ಆರ್​​ಟಿಸಿ ಮೂಲಕ ಜನರಿಗೆ ಸೌಕರ್ಯ ಮಾಡಿದೆ. ಇದರ ಸದುಪಯೋಗವನ್ನು ಜನತೆ ಪಡೆಯಬೇಕಿದೆ ಎಂದು ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا