Urdu   /   English   /   Nawayathi

ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿನಿ ಮುಖಕ್ಕೆ ಕಪ್ಪು ಬಣ್ಣ ಬಳಿದು ಶಾಲೆ ಆವರಣದಲ್ಲಿ ಓಡಿಸಿದ ಶಿಕ್ಷಕಿ!

share with us

ಹಿಸ್ಸಾರ್​ (ಹರಿಯಾಣ): 10 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕಿ ವಿಚಿತ್ರ ಶಿಕ್ಷೆ ಕೊಟ್ಟಿದ್ದು, 4 ನೇ ತರಗತಿ ಬಾಲಕಿ ಮುಖಕ್ಕೆ ಕಪ್ಪು ಬಣ್ಣ ಬಳಿದು ಶಾಲೆಯ ಆವರಣದಲ್ಲಿ ಓಡಾಡುವಂತೆ ಹೇಳಿದ್ದಾರೆ. ಹರಿಯಾಣದ ಹಿಸ್ಸಾರ್​ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು, ಡಿಸೆಂಬರ್​ 6ರಂದು ನಡೆದ ಪರೀಕ್ಷೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಹೀಗಾಗಿ 9 ವರ್ಷದ ಬಾಲಕಿಗೆ ಶಿಕ್ಷಕಿ ಈ ರೀತಿಯ ಶಿಕ್ಷೆ ಕೊಟ್ಟಿದ್ದಾರೆ. ಕಪ್ಪು ಬಣ್ಣ ಬಳಿದು ಆವರಣದಲ್ಲಿ ಓಡಾಡುವಂತೆ ಮಾಡಿದ್ದರಿಂದ ಬಾಲಕಿಗೆ ಅವಮಾನ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆ ಖಂಡಿಸಿ ಪ್ರತಿಭಟನೆಗೆ ನಿಂತಿರುವ ಬಾಲಕಿ ಪೋಷಕರು ಶಾಲೆಯನ್ನು ಮುಚ್ಚುವಂತೆ ಹಠ ಹಿಡಿದಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا