Urdu   /   English   /   Nawayathi

ಮೂರು ವರ್ಷಗಳಿಂದ ಶೌಚಾಲಯದಲ್ಲೇ ವಾಸಿಸುತ್ತಿದ್ದಾರೆ ಈ ತಾಯಿ... ಕಾರಣ ?

share with us

ಮಯೂರ್​ಭಂಜ್​(ಒಡಿಶಾ): 10 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) 72 ವರ್ಷ ವಯಸ್ಸಿನ ಬುಡಕಟ್ಟು ವಿಧವೆಯೊಬ್ಬರು ಕಳೆದ 3 ವರ್ಷಗಳಿಂದ ಶೌಚಾಲಯದಲ್ಲಿ ವಾಸಿಸುತ್ತಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ದ್ರೌಪದಿ ಬೆಹರಾ, ತಮ್ಮ ಮಗಳು ಹಾಗೂ ಮೊಮ್ಮಗನೊಂದಿಗೆ ಶೌಚಾಲಯವನ್ನೇ ತಮ್ಮ ಮನೆಯಾಗಿಸಿ ವಾಸವಿದ್ದಾರೆ. ನಾನು ಇದೇ ಶೌಚಾಲಯದಲ್ಲಿ ಅಡುಗೆ ಮಾಡುವಾಗ ನನ್ನ ಕುಟುಂಬಸ್ಥರು ಹೊರಗಿರುತ್ತಾರೆ. ಮಲಗುವುದು ಕೂಡಾ ಅಲ್ಲೇ ಎಂದು ದ್ರೌಪದಿ ತಿಳಿಸಿದ್ದಾರೆ.

ಶೌಚಾಲಯದಲ್ಲೇ ವಾಸಿಸುತ್ತಿರುವ ಬುಡಕಟ್ಟು ವಿಧವೆ, tribal woman has been living in a toilet in Odisha

ವಿಧವೆ ವಾಸಿಸುತ್ತಿರುವ ಶಾಚಾಲಯ

ಮನೆ ನಿರ್ಮಿಸಿಕೊಡಬೇಕಾಗಿ ಈಗಾಗಲೇ ಹಲವು ಬಾರಿ ಆಡಳಿತ ವರ್ಗಗಳಿಗೆ ಮನವಿ ಮಾಡಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದ್ರೌಪದಿ ಬೆಹರಾ ಅಳಲು ತೋಡಿಕೊಂಡಿದ್ದಾರೆ.

ಶೌಚಾಲಯದಲ್ಲೇ ವಾಸಿಸುತ್ತಿರುವ ಬುಡಕಟ್ಟು ವಿಧವೆ, tribal woman has been living in a toilet in Odisha

ಬುಡಕಟ್ಟು ಮಹಿಳೆ ದ್ರೌಪದಿ ಬೆಹರಾ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ಸರ್ಪಂಚ್​ ಆಗಿರುವ ಬುಧುರಾಮ್​ ಪುಟಿ, ನಾನಗೆ ಈ ಮಹಿಳೆಗೆ ಮನೆ ಕಟ್ಟಿಕೊಡುವ ಅಧಿಕಾರವಿಲ್ಲ. ಯಾವುದಾದರೂ ಯೋಜನೆಗಳು ಬಂದರೆ ಅವರಿಗೆ ಅದನ್ನು ಒದಗಿಸುತ್ತೇನೆ ಎಂದು ಹೇಳಿದ್ದಾರೆ.

ಶೌಚಾಲಯದಲ್ಲೇ ವಾಸಿಸುತ್ತಿರುವ ಬುಡಕಟ್ಟು ವಿಧವೆ, tribal woman has been living in a toilet in Odisha

ಸರ್ಪಂಚ್​ ಬುಧುರಾಮ್​ ಪುಟಿ

ದೇಶ ಇಷ್ಟು ಮುಂದುವರಿದರೂ, ಇನ್ನೂ ಕೆಳಮಟ್ಟದಲ್ಲೇ ಇರುವ ವರ್ಗವೊಂದು ಸಮಾಜದಲ್ಲಿ ಇದೇ ಅನ್ನೋದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا