Urdu   /   English   /   Nawayathi

ಪೌರತ್ವ ತಿದ್ದುಪಡಿ ಮಸೂದೆಗೆ ಭಾರಿ ವಿರೋಧ, ಅಸ್ಸೋಂನಲ್ಲಿ ಭುಗಿಲೆದ್ದ ಆಕ್ರೋಶ

share with us

ಗುವಾಹಟಿ(ಅಸ್ಸಾಂ): 10 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಿನ್ನೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಅಸ್ಸೋಂನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ವಿದ್ಯಾರ್ಥಿ ಸಂಘಟನೆ (NESO) ಮತ್ತು ಅಸ್ಸೋಂ ವಿದ್ಯಾರ್ಥಿ ಸಂಘ(AASU) 12 ಗಂಟೆಗಳ ಬಂದ್​ಗೆ ಕರೆಕೊಟ್ಟಿದ್ದು, ಗುವಾಹಟಿಯಲ್ಲಿ ಅಂಗಡಿ-ಮುಂಗಟ್ಟುಗಳು ಬೆಳಗ್ಗೆಯಿಂದ ಮುಚ್ಚಿವೆ.

ಇನ್ನೊಂದೆಡೆ ಅಸ್ಸೋಂ ವಿದ್ಯಾರ್ಥಿ ಸಂಘವು ದಿಬ್ರುಘಡ​ದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಸ್ಥಳೀಯರು ಕೂಡಾ ಪ್ರತಿಭಟನೆ ಕೈ ಜೋಡಿಸಿದ್ದು, ಪ್ರತಿಭಟನೆ ದೊಡ್ಡ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ನಿನ್ನೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ್ದು, ಮಸೂದೆ ಅಂಗೀಕಾರಗೊಂಡಿದೆ. ಈ ಹಿನ್ನೆಲೆಯಲ್ಲಿ ಮಸೂದೆ ವಿರುದ್ಧ ಅಸ್ಸೋಂನಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಇನ್ನೊಂದೆಡೆ ಮಸೂದೆ ವಿರುದ್ಧ ತ್ರಿಪುರಾ ರಾಜಧಾನಿ ಅಗರ್ತಾಲದಲ್ಲೂ ಪ್ರತಿಭಟನೆ ನಡೆಯುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا