Urdu   /   English   /   Nawayathi

38 ಮಂದಿ ಇದ್ದ ವಾಯುಸೇನೆಯ ವಿಮಾನ ನಾಪತ್ತೆ... ಚುರುಕುಗೊಂಡ ಶೋಧ ಕಾರ್ಯ

share with us

ಸ್ಯಾಂಟಿಯಾಗೋ: 10 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಚಿಲಿ ವಾಯುಸೇನೆಗೆ ಸೇರಿದ ವಿಮಾನವೊಂದು ಸೋಮವಾರ ಸಂಜೆಯಿಂದ ಸಂಪರ್ಕ ಕಡಿದುಕೊಂಡಿದೆ. ಈ ವಿಮಾನದಲ್ಲಿ 38 ಮಂದಿ ಇದ್ದರು ಎನ್ನಲಾಗಿದೆ. ಸಿ-130 ಹರ್ಕ್ಯುಲಸ್ ವಿಮಾನದಲ್ಲಿ 17 ಮಂದಿ ಸಿಬ್ಬಂದಿ ಹಾಗೂ 21 ಮಂದಿ ಪ್ರಯಾಣಿಕರು ಸೇರಿ ಒಟ್ಟು 38 ಜನ ಪ್ರಯಾಣಿಸುತ್ತಿದ್ದರು. ರಾಡಾರ್​ ಸಂಪರ್ಕ ಕಡಿತಗೊಂಡ ಬಳಿಕ ಚಿಲಿ ಮಿಲಿಟರಿಯಲ್ಲಿ ಅಲರ್ಟ್​ ಘೋಷಿಸಲಾಗಿದ್ದು, ವಿಮಾನ ಪತ್ತೆ ಕಾರ್ಯ ಆರಂಭಿಸಲಾಗಿದೆ. ಚಿಲಿ ದೇಶದ ದಕ್ಷಿಣ ಭಾಗದ ಪುಂಟಾ ಅರೆನಾಸ್​​ನಿಂದ ವಿಮಾನ ಸೋಮವಾರ ಸಂಜೆ 4.55ಕ್ಕೆ ಟೇಕಾಫ್​ ಅಗಿತ್ತು. ಸಂಜೆ 6.13ರ ಸುಮಾರಿಗೆ ಈ ವಿಮಾನ ರಾಡಾರ್​ ಸಂಪರ್ಕ ಕಡಿದುಕೊಂಡಿತ್ತು ಎನ್ನಲಾಗಿದೆ. ಈ ವಿಮಾನ ಅಂಟಾರ್ಟಿಕಾಗೆ ತೆರಳುತ್ತಿತ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا