Urdu   /   English   /   Nawayathi

ಏಕಾ ಏಕಿ ಬೆಂಕಿಗಾಹುತಿಯಾದ ಚಲಿಸುತ್ತಿದ್ದ ಪಲ್ಸರ್ ಬೈಕ್ 

share with us

ಕಾರವಾರ: 09 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಸದಾಶಿವಗಡದಲ್ಲಿ ಚಲಿಸುತ್ತಿದ್ದ ಪಲ್ಸರ್ ಬೈಕೊಂದು ಏಕಾ ಏಕಿ ಬೆಂಕಿ ಹತ್ತಿಕೊಂಡ ಪರಿಣಾಮ ಸಂಪೂರ್ಣವಾಗಿ ಸುಟ್ಟುಹೋಗಿದೆ. ಭಾನುವಾರದಂದು ಮಧ್ಯಾಹ್ನ ಸುಮಾರು 2:30ಗಂಟೆಗೆ ಗೋವಾದಿಂದ ಕಾರವಾರದ ಕಡೆಗೆ ಬೈಕಿನಲ್ಲಿ ಇಬ್ಬರು ಬರುತ್ತಿದ್ದ ವೇಳೆ ಸದಾಶಿವಗಡದಲ್ಲಿರುವ ಸ್ಟರ್ಲಿಂಗ್ ಹಾಲಿಡೇಸ್ ಹೋಟೆಲ್ ಬಳಿ ತುಲುಪಿದ ನಂತರ ಏಕಾ ಏಕಿ ಬೈಕಿನಲ್ಲಿ ಹೊಗೆ ಬರುತ್ತಿರುವುದನ್ನು ಕಂಡ ಸವಾರರಿಬ್ಬರು ತಕ್ಷಣ ವಾಹನದಿಂದ ಇಳಿದು ದೂರಕ್ಕೆ ಸರಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಂಡು ಬಂದಿದ್ದು, ಬೆಂಕಿ ಹತ್ತಿ ಉರಿಯತೊಡಗಿತು. ಇದನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ಆರಿಸುವ ಹೊತ್ತಿಗೆ ಬೈಕ್ ಸುಟ್ಟು ಹೋಗಿತ್ತು ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا