Urdu   /   English   /   Nawayathi

ದಾವಣಗೆರೆಯಲ್ಲಿ ಎರಡೂವರೆ ದಶಕದ ಬಳಿಕ ನೆಲಕ್ಕುರುಳಿದ ಅಕ್ರಮ ಕಟ್ಟಡಗಳು

share with us

ದಾವಣಗೆರೆ: 09 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜಿಲ್ಲೆಯ ಬಾಷಾ ನಗರದ ಕಲ್ಯಾಣ ಮಂಟಪ ಸುತ್ತಮುತ್ತ ನಿರ್ಮಿಸಲಾಗಿದ್ದ ಅಕ್ರಮ ಕಟ್ಟಡಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದ್ದಾರೆ. 30 ವರ್ಷಗಳ ಹಿಂದೆ ಬಡವರ ಕಾರ್ಯಕ್ರಮಗಳಿಗೆ ಅನುಕೂಲಕ್ಕಾಗಿ ಕಲ್ಯಾಣ ಮಂಟಪ ನಿರ್ಮಿಸಲಾಗಿತ್ತು. ಆದರೆ, ಅದು ಬಡವರಿಗೆ ಉಪಯೋಗವಾಗುವ ಬದಲು ಅನ್ಯ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು.‌ ಮಂಟಪದ ಸುತ್ತ ಮುತ್ತ ಸ್ಥಳೀಯರು ಅಕ್ರಮ ಕಸಾಯಿ ಖಾನೆ, ಅಕ್ರಮ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡು ಕಲ್ಯಾಣ ಮಂಟಪವೇ ಕಾಣದಂತೆ ಮಾಡಿದ್ದರು. ಈ ಸಂಬಂಧ ಮಹಾನಗರ ಪಾಲಿಕೆಗೆ ಎರಡೂವರೆ ದಶಕಗಳಿಂದ ಹಲವಾರು ದೂರುಗಳು ಬರುತ್ತಿದ್ದರೂ ಕ್ಯಾರೆ ಎಂದಿರಲಿಲ್ಲ. ಇದೀಗ ಎಚ್ಚೆತ್ತ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಕಲ್ಯಾಣ ಮಂಟಪದ ಸುತ್ತಲಿನ ಅಕ್ರಮ ವಾಣಿಜ್ಯ ಕಟ್ಟಡಗಳನ್ನ ತೆರವುಗೊಳಿಸಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ಆಗಮಿಸಿದ ಜೆಸಿಬಿಗಳು ಸುಮಾರು 25 ಕ್ಕೂ ಹೆಚ್ಚು ಅಕ್ರಮ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿವೆ. ಅಂಗಡಿ ಮಾಲೀಕರಿಗೆ ಕಳೆದ ಒಂದು ವಾರದ ಹಿಂದೆಯೇ ತೆರವು ಮಾಡುವಂತೆ ಪಾಲಿಕೆ ಮೌಖಿಕ ಸೂಚನೆ ನೀಡಿತ್ತು. ಆದರೂ ತೆರವು ಮಾಡಿರಲಿಲ್ಲ. ಹೀಗಾಗಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇದಕ್ಕೆ ಸ್ಥಳೀಯರಿಂದಲೂ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ನಗರದಲ್ಲಿ ಇದೇ ರೀತಿ ಪಾಲಿಕೆ ಜಾಗದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರುವುಗೊಳಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಕಾರ್ಯಾಚರಣೆ ನಡೆಸಿರುವ ಜಾಗದಲ್ಲಿ ಏನೇನಿವೆ ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಆದರೆ, ತೆರವು ಮಾಡಿ ಕಲ್ಯಾಣ ಮಂಟಪವನ್ನ ಸಾರ್ವಜನಿಕರ ಮುಕ್ತ ಬಳಕೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا