Urdu   /   English   /   Nawayathi

ಯಾಕೆ ಈ ವಿಕೃತಿ? ಅತ್ಯಾಚಾರ ಎಂಬ ಹಿಂಸೆ ಏಕೆ ನಡೆಯುತ್ತೆ? ಮನೋವಿಜ್ಞಾನಿಗಳಿಂದ ವಿಶ್ಲೇಷಣೆ

share with us

ಅತ್ಯಾಚಾರ ಎಂಬುದು ಅತಿದೊಡ್ಡ ಅಪರಾಧ. ಇದು ಮಹಿಳೆಯ ಜೀವನವನ್ನು ನಾಶ ಮಾಡಿಬಿಡುತ್ತದೆ. ಇದರ ಜೊತೆಗೇ ಲೈಂಗಿಕ ದೌರ್ಜನ್ಯ, ಕಿರುಕುಳ, ಮಾನಸಿಕ ಅನಾರೋಗ್ಯವೂ ಇದರ ಜೊತೆಗೇ ನಡೆದುಹೋಗುತ್ತದೆ. ರೇಪಿಸ್ಟ್‌ಗಳು ಅಸಹಾಯಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಮೂಲಕ ಪೈಶಾಚಿಕ ತೃಪ್ತಿ ಪಡೆಯುತ್ತಾರೆ. ಹಲವು ಕಾಯ್ದೆಗಳಿದ್ದರೂ, ಹೈದರಾಬಾದ್‌ ಮತ್ತು ವಾರಂಗಲ್‌ನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಇಂತಹ ಪಿಶಾಚಿಗಳು ಮಹಿಳೆಯರ ಮೇಲೆ ನಡೆಸುವ ಹಿಂಸೆಗೆ ಸಾಕ್ಷಿಯಾಗಿವೆ. ವಿಶ್ವದ ಹಲವೆಡೆ ಅತ್ಯಾಚಾರ, ಕ್ರೌರ್ಯ, ಹಿಂಸೆ ಮತ್ತು ಅತ್ಯಾಚಾರಿಗಳ ಮಾನಸಿಕ ಸ್ಥಿತಿಯ ಬಗ್ಗೆ ಸಂಶೋಧನೆಗಳು ನಡೆದಿವೆ.

ತಜ್ಞರು ಏನು ಹೇಳುತ್ತಾರೆ?

ಅತ್ಯಾಚಾರ ಎಂಬುದು ಮಹಿಳೆಗೆ ಬೆದರಿಸುವ ಉದ್ದೇಶದಿಂದ ಮಹಿಳೆಯರ ಮೇಲೆ ಪುರುಷರು ನಡೆಸುವ ಲೈಂಗಿಕ ದೌರ್ಜನ್ಯ. ಈ ಕೃತ್ಯದಲ್ಲಿ ಮಹಿಳೆಯರನ್ನು ಹೊಣೆಯಾಗಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

- ಸ್ತ್ರೀವಾದಿ ಲೇಖಕಿ ಸುಶಾನ್‌ ಬ್ರೌನ್‌ ಮಿಲ್ಲರ್ (ಅಗೇನಸ್ಟ್‌ ಔಟ್‌ ವಿಲ್‌ 1975 ಎಂಬ ಕೃತಿಯಿಂದ ಆಯ್ದ ಸಾಲು)

ಅತ್ಯಾಚಾರಿಗಳು ಮೂರು ಕ್ಯಾರೆಕ್ಟರ್‌ಗಳನ್ನು ಹೊಂದಿರುತ್ತಾರೆ

1. ವಿಕೃತಿ

2. ಅತ್ಯುತ್ಸಾಹ ಅಥವಾ ಭಾವಪರವಶತೆ

3. ದಾಳಿಯ ಬಗ್ಗೆ ಹಿರಿಮೆಯ ಭಾವ

ಅತ್ಯಾಚಾರವನ್ನು ಮಾನಸಿಕ ಸ್ಥಿಮಿತವಿದ್ದಾಗ ವ್ಯಕ್ತಿ ನಡೆಸುವುದಿಲ್ಲ. ಮಾನಸಿಕ ಸ್ಥಿಮಿತವನ್ನು ವ್ಯಕ್ತಿ ಸಂಪೂರ್ಣವಾಗಿ ಅಥವಾ ಭಾಗಶಃ ಕಳೆದುಕೊಂಡಾಗ ಮಾತ್ರ ನಡೆಸುತ್ತಾನೆ.

ನಿಕೋಲಾಸ್‌ ಗ್ರೋತ್‌ (ಮ್ಯಾನ್‌ ಹು ರೇಪ್‌ - 1976)

ಅಸಹಾಯಕರೇ ಬಲಿಪಶು: ಅತ್ಯಾಚಾರಿಗಳು ಸಾಮಾನ್ಯವಾಗಿ ಅಸಹಾಯಕ ವ್ಯಕ್ತಿಗಳಾದ ಮಹಿಳೆಯರು, ಒಂಟಿ ಯುವತಿಯರು ಮತ್ತು ಮಕ್ಕಳನ್ನೇ ಗುರಿಯಾಗಿಸಿಕೊಳ್ಳುತ್ತಾರೆ. ಲೈಂಗಿಕ ಕೃತ್ಯದ ಬಗ್ಗೆ ತಿಳಿವಳಿಕೆ ಇಲ್ಲದಿರುವುದರಿಂದ ಹಾಗೂ ಲೈಂಗಿಕ ಕೃತ್ಯಗಳನ್ನು ಗುರುತಿಸಲು ಸಾಧ್ಯವಾಗದ್ದರಿಂದ ಅಥವಾ ಅತ್ಯಾಚಾರಿಗಳು ಚಾಕೊಲೇಟ್‌ ಅಥವಾ ಆಟಿಕೆಗಳನ್ನು ನೀಡಿದಾಗ ವಿರೋಧಿಸಲು ತಿಳಿದಿಲ್ಲದೇ ಇರುವುದರಿಂದ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತವೆ.

ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದು: ಅತ್ಯಾಚಾರಿಗಳು ಸಾಮಾನ್ಯ ಮನುಷ್ಯರಂತೆ ಭಾವನೆಗಳನ್ನು ನಿಯಂತ್ರಿಸುವುದಿಲ್ಲ. ಅತ್ಯಾಚಾರಿಗಳು ಮಾನಸಿಕವಾಗಿ ಸ್ಥಿಮಿತದಲ್ಲಿ ಇಲ್ಲದೇ ಇರುವುದರಿಂದ ಅವರು ಯಾವಾಗ ಅತ್ಯಾಚಾರ ನಡೆಸಬಹುದು ಮತ್ತು ದಾಳಿ ನಡೆಸಬಹುದು ಎಂಬುದನ್ನು ಹೇಳಲಾಗದು ಎಂದು ಜಾರ್ಜ್‌ ಟೌನ್ ಯೂನಿವರ್ಸಿಟಿಯ ಫೊರೆನ್ಸಿಕ್‌ ಮನಃಶಾಸ್ತ್ರಜ್ಞ ರಾಬರ್ಟ್‌ ಸೈಮನ್‌ ಹೇಳುತ್ತಾರೆ. ಅತ್ಯಾಚಾರಿಗಳಲ್ಲಿ ಅನುಕಂಪ ಮತ್ತು ವಿನೀತ ಭಾವಗಳು ಇರುವುದಿಲ್ಲ. ಇಂತಹ ಕೃತ್ಯಗಳು ಅಮಾನವೀಯ ಮತ್ತು ಕ್ರೂರ ಎಂದು ಸಾಮಾನ್ಯ ಮನುಷ್ಯರಂತೆ ಅವರು ಯೋಚಿಸುವುದಿಲ್ಲ. ಅಷ್ಟೇ ಅಲ್ಲ, ಶೇ. 60 ರಿಂದ 70 ರಷ್ಟು ಅತ್ಯಾಚಾರ ಘಟನೆಗಳು ಕೇವಲ ಬಯಕೆಗಾಗಿ ನಡೆಯುವುದಿಲ್ಲ. ಅಸಹಾಯಕ ಮಹಿಳೆ ಅಥವಾ ಹೆಣ್ಣುಮಕ್ಕಳನ್ನು ಆವರಿಸಿಕೊಳ್ಳಲು, ಹಿರಿಮೆಯನ್ನು ಸಾಧಿಸಲು ಮತ್ತು ಲೈಂಗಿಕ ದಾಳಿ ನಡೆಸಲು ಅತ್ಯಾಚಾರಿಗಳು ಬಯಸುತ್ತಾರೆ. ಇದರ ಜೊತೆಗೆ, ಶತ್ರುಗಳ ಮೇಲೆ ಪ್ರತೀಕಾರಕ್ಕಾಗಿ ಮಕ್ಕಳನ್ನು ಅಪಹರಿಸುವುದು, ಪತ್ನಿಯ ಮೇಲೆ ಅತ್ಯಾಚಾರ ನಡೆಸುವುದು ಮತ್ತು ಇತರ ದೌರ್ಜನ್ಯ ನಡೆಸುವ ಕೆಲಸ ಮಾಡುತ್ತಾರೆ. ಸಾಮಾಜಿಕ ವಿಜ್ಞಾನಿಗಳ ಪ್ರಕಾರ ಈ ಕೃತ್ಯಗಳು ಲೈಂಗಿಕ ಸ್ವೇಚ್ಛೆ ಮತ್ತು ಮಹಿಳೆಯರ ಮೇಲೆ ಹಿರಿಮೆ ಸಾಧಿಸುವ ಕೃತ್ಯವೇ ಈ ಅತ್ಯಾಚಾರವಾಗಿರುತ್ತದೆ. ಸಾಮೂಹಿಕ ಅತ್ಯಾಚಾರದ ಘಟನೆಗಳನ್ನು ಗಮನಿಸಿದರೆ, ಇತರರ ಬೆಂಬಲ ಸಿಕ್ಕಾಗ ಇಂತಹ ಕೃತ್ಯಗಳು ನಡೆಯುತ್ತವೆ.

ಅವರ ಮನಸ್ಥಿತಿ ಯಾವುದು?

ಜೈಲಿನಲ್ಲಿರುವ ಅತ್ಯಾಚಾರಿಗಳ ಜೊತೆ ಮಾತನಾಡಿದ ನಂತರ ಕ್ಲಿನಿಕಲ್‌ ಸೈಕಾಲಜಿಸ್ಟ್‌ ಡಾ. ರಜತ್‌ ಮಿತ್ರಾ ಅಭಿಪ್ರಾಯಪಟ್ಟಿರುವುದೇನೆಂದರೆ, ಅತ್ಯಾಚಾರ ನಡೆಸಿದ ನಂತರ ಅತ್ಯಾಚಾರಿಗಳಿಗೆ ಮುಕ್ತ ಭಾವ ಮೂಡುತ್ತದೆ. ತಾವು ಅತ್ಯಾಚಾರ ಮಾಡಿದ್ದೇವೆ ಎಂದು ಗೊತ್ತಾದ ಮೇಲೂ ತಾವು ಮಾಡಿದ್ದು ಅಪರಾಧ ಎಂಬ ಭಾವ ಅವರಲ್ಲಿ ಮೂಡುವುದಿಲ್ಲ. ಶೇ.90 ರಷ್ಟು ಪ್ರಕರಣಗಳಲ್ಲಿ ಪರಿಚಿತ ವ್ಯಕ್ತಿಗಳಿಂದ ಅತ್ಯಾಚಾರ ನಡೆಯುತ್ತದೆ. ಇನ್ನು, ಇತರರು ನಂಬುವುದಿಲ್ಲ ಎಂಬ ಕಾರಣಕ್ಕೆ ಶೇ. 25 ರಷ್ಟು ಮಹಿಳೆಯರು ಮತ್ತು ಮಕ್ಕಳು ಅತ್ಯಾಚಾರದ ಘಟನೆಗಳನ್ನು ಬಹಿರಂಗಗೊಳಿಸುವುದಿಲ್ಲ. ಅತ್ಯಾಚಾರವನ್ನು ಯೋಜನೆಯಂತೆ ನಡೆಸಲಾಗುತ್ತದೆ. ಸಂತ್ರಸ್ತರಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿರುತ್ತದೆ. ಕೇವಲ ಅವರಿಗೆ ಆದ ಗಾಯಕ್ಕೆ ಚಿಕಿತ್ಸೆ ಸಾಲುವುದಿಲ್ಲ. ಅತ್ಯಾಚಾರಿಗಳಲ್ಲಿ ಹಲವು ವಿಧಗಳಿರುತ್ತವೆ. ಆತ್ಮವಿಶ್ವಾಸದ ಕೊರತೆಯಿದ್ದಾಗ ಇತರರ ಮೇಲೆ ಪ್ರಭುತ್ವ ಸಾಧಿಸಲು ಮತ್ತು ದಾಳಿ ನಡೆಸಲು ಬಯಸುತ್ತಾರೆ. ಕೆಲವರು ಸಿಟ್ಟು ತೋರಿಸುತ್ತಾರೆ, ದೈಹಿಕವಾಗಿ, ಮಾನಸಿಕವಾಗಿ ದೌರ್ಜನ್ಯ ನಡೆಸುತ್ತಾರೆ ಮತ್ತು ತಾವು ಖುಷಿ ಪಡೆಯಲು ನಿಂದಿಸಿ ನೋವು ನೀಡುತ್ತಾರೆ. ಕೆಲವರು ದ್ವೇಷ, ಅವಮಾನ ಮಾಡುತ್ತಾರೆ ಹಾಗೂ ಇತರರ ಮೇಲೆ ಕೀಳು ಭಾಷೆಯನ್ನು ಬಳಸುತ್ತಾರೆ, ವಿಕೃತಿ, ಸಿಟ್ಟು ಮತ್ತು ಇತರರ ಮೇಲೆ ಅವಕಾಶವಾದಿ ವರ್ತನೆ ತೋರುತ್ತಾರೆ. ಸೈಕಿಯಾಟ್ರಿಸ್ಟ್‌ ಡಾ. ಗೌರಿ ದೇವಿ ಹೇಳುವಂತೆ ಮೌಲ್ಯಗಳು, ನೈತಿಕ ಬೆಂಬಲ, ಸಂಬಂಧ ಮತ್ತು ಸಮಾಜದ ಬಗ್ಗೆ ಮಕ್ಕಳಿಗೆ ಪಾಲಕರು ತಿಳಿ ಹೇಳಬೇಕು. ಮಕ್ಕಳ ಮೇಲೆ ಪಾಲಕರು ಗಮನ ಇಡಬೆಕು, ಸ್ಮಾರ್ಟ್‌ ಫೋನ್‌ಗಳು, ತಡರಾತ್ರಿ ಚಾಟಿಂಗ್ ಮಾಡುವುದು, ವೀಡಿಯೋ ಕಾಲ್‌ಗಳನ್ನು ಮಾಡುವುದು, ಕೆಟ್ಟ ಸ್ನೇಹಿತರು, ಗ್ರೂಪ್‌ಗಳು, ಧೂಮಪಾನ, ಮದ್ಯಪಾನ ಸೇವನೆ, ಅಶ್ಲೀಲ ವೀಡಿಯೋಗಳನ್ನು ನೋಡುವುದು, ಹಿಂಸೆ ಮತ್ತು ಅಪರಾಧದಿಂದ ಮಕ್ಕಳನ್ನು ದೂರವಿಡಬೇಕು. 10 ರಿಂದ 16 ವರ್ಷ ಮಕ್ಕಳಿಗೆ ಲೈಂಗಿಕ ಭಾವನೆಗಳನ್ನು ನಿಯಂತ್ರಿಸುವ ಬಗ್ಗೆ ಸಲಹೆ ನೀಡಬೇಕು. ಅವರು ಅಧ್ಯಯನದ ಮೇಲೆ ಗಮನ ಹರಿಸುವಂತೆ ಮಾಡಬೇಕು, ಆಹಾರ ಮತ್ತು ನಿದ್ರ ಸಮಯಕ್ಕೆ ಸರಿಯಾಗಿ ಲಭ್ಯವಾಗಬೇಕು. ಹೆಣ್ಣು ಮಕ್ಕಳು ಒಂಟಿಯಾಗಿ ತಿರುಗಾಡುವಾಗ ಎಚ್ಚರವಾಗಿರಬೇಕು ಮತ್ತು ಸಲಹೆಗಾಗಿ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا