Urdu   /   English   /   Nawayathi

ವಿಮಾನ ಪತನ: ಇಬ್ಬರು ಮಕ್ಕಳು, ಪೈಲಟ್ ಸೇರಿ 9 ಮಂದಿ ದಾರುಣ ಸಾವು

share with us

ಸೌತ್ ಡಕೋಟಾ: 04 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ವಿಮಾನ ಪತನವಾಗಿ ಎರಡು ಮಕ್ಕಳು ಸೇರಿದಂತೆ ಒಂಬತ್ತು ಜನರು ಮೃತಪಟ್ಟ ಘಟನೆ ಅಮೇರಿಕಾದ ಸೌತ್ ಡಕೋಟಾದಲ್ಲಿ ನಡೆದಿದೆ. ಪಿಲಾಟಸ್ ಪಿಸಿ-12 ವಿಮಾನ ಟೇಕಾಫ್ ಆದ ಕೆಲ ಸಮಯದಲ್ಲೇ ಪತನವಾಗಿದೆ. ವರದಿಯ ಪ್ರಕಾರ ಶನಿವಾರ ಮಧ್ಯಾಹ್ನ 12:30 ಸಮಯದಲ್ಲಿ ಅಪಘಾತವಾಗಿದೆ. ಈ ವಿಮಾನವು ಚೆಂಬರ್ಲೇನ್ ನಿಂದ ಸಿಯೋಕ್ಸ್ ಫಾಲ್ಸ್ನ ಪಶ್ಚಿಮಕ್ಕೆ ಹೊರಟಿತ್ತು. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ವಿಮಾನದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನುಕೂಲಕರವಲ್ಲದ  ಹವಾಮಾನದ ಹಿನ್ನೆಲೆಯಲ್ಲಿ  ಈ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا