Urdu   /   English   /   Nawayathi

ಎನ್​ಎಂಪಿಟಿಗೆ ಬಂತು 3ನೇ ಪ್ರವಾಸಿ ಹಡಗು

share with us

ಮಂಗಳೂರು: 21 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ನವ ಮಂಗಳೂರು ಬಂದರಿಗೆ ವಿದೇಶದಿಂದ ಇಂದು 3ನೇ ಪ್ರವಾಸಿ ಹಡಗು ಆಗಮಿಸಿದೆ. ಈ ವರ್ಷದ ಪ್ರವಾಸಿ ಹಡಗು ಬರಲು ಇತ್ತೀಚೆಗೆ ಆರಂಭವಾಗಿದ್ದು, ಇಂದು ಬಂದ ಹಡಗು ಮೂರನೇಯದಾಗಿದೆ. ಸಿಲ್ವರ್ ಸ್ಪಿರಿಟ್ ಎಂಬ ಹೆಸರಿನ ಈ ಹಡಗಿನಲ್ಲಿ 450 ಪ್ರವಾಸಿಗರು ಮತ್ತು 300 ಸಿಬ್ಬಂದಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕರಾವಳಿ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಬೆಳಗ್ಗೆ 8.05 ಕ್ಕೆ ಮಂಗಳೂರಿನ ಬಂದರಿಗೆ ಆಗಮಿಸಿದ ಈ ಪ್ರವಾಸಿ ಹಡಗು ಸಂಜೆ 6 ಗಂಟೆಯವರೆಗೆ ಮಂಗಳೂರಿನಲ್ಲಿ ಇರಲಿದೆ. ಇದರಲ್ಲಿ ಬಂದ 250 ಪ್ರವಾಸಿಗರಿಗೆ ಮಂಗಳೂರು ನಗರದ ಪ್ರವಾಸಿತಾಣಗಳನ್ನು ನೋಡಲು ಎನ್​ಎಂಪಿಟಿ ವ್ಯವಸ್ಥೆ ಮಾಡಿದೆ. ಗೋವಾ ಪ್ರವಾಸ ಮುಗಿಸಿ ಬಂದ ಈ ಪ್ರವಾಸಿ ಹಡಗು ಮಂಗಳೂರಿನಿಂದ ಕೇರಳದ ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا