Urdu   /   English   /   Nawayathi

ಜಾರ್ಜ್​ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ, ಬಿಜೆಪಿಯವರು ಈಗೇನಂತಾರೆ!?: ದಿನೇಶ್ ಗುಂಡೂರಾವ್

share with us

ಬೆಂಗಳೂರು: 21 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬಿಜೆಪಿ ನಾಯಕರು ಮಾಜಿ ಸಚಿವ ಕೆ.ಜೆ. ಜಾರ್ಜ್ ಮೇಲೆ ಆರೋಪ ಮಾಡಿಕೊಂಡು ಬರುತ್ತಿದ್ದರು. ಇದೀಗ ಸಿಬಿಐ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದೆ. ಟೀಕಿಸಿದ್ದ ನಾಯಕರು ಈಗೇನು ಹೇಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿ. ಗಣಪತಿ ಅವರ ವಿಚಾರದಲ್ಲಿ ಜಾರ್ಜ್ ಅವರದ್ದು ತಪ್ಪಿದ್ದೆ ಎಂದು ಆರೋಪ ಮಾಡಿ ವಿಧಾನಸೌಧದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದರು. ಈ ಪ್ರಕರಣಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇರಲಿಲ್ಲ. ಬಿಜೆಪಿ ನಾಯಕರು ಯಾವುದಾದರೂ ಸಾಕ್ಷ್ಯಾಧಾರಗಳು ಇವೆಯಾ ಎಂದು ತಿಳಿದುಕೊಳ್ಳಲಿಲ್ಲ. ಈಗ ಸಿಬಿಐ ಕ್ಲೀನ್ ಚಿಟ್ ಕೊಟ್ಟಿದೆ. ಬಿಜೆಪಿ ಅವರು ಇವಾಗ ಕ್ಷಮೆ ಕೇಳಬೇಕು. ಅನೇಕ ವಿಚಾರಗಳು ಈ ದೇಶದಲ್ಲಿ ಆಗಿವೆ. ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಇವತ್ತು ಬಿಜೆಪಿ ಅದನ್ನೇ ಮಾಡುತ್ತಿದೆ. ತಪ್ಪು ಮಾಡಿದರೆ ಶಿಕ್ಷೆ ಕೊಡಲಿ ಎಂದರು. ಪ್ರಕರಣದಲ್ಲಿ ಜಾರ್ಜ್ ಮೇಲೆ ಗಂಭೀರ ಆರೋಪ ಬರುತ್ತಿದ್ದಂತೆ ಅವರು ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡಿದ್ದರು. ಅಲ್ಲದೇ ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ನಾವು ಸ್ಥಳೀಯವಾಗಿ ತನಿಖೆ ಮಾಡದೇ ಸಿಬಿಐಗೆ ವಹಿಸಿದ್ದೆವು. ಕೂಲಂಕಷ ತನಿಖೆಯ ನಂತರ ಸಿಬಿಐ ವರದಿ ನೀಡಿದ್ದು, ಜಾರ್ಜ್ ಅವ​ರನ್ನ ಆರೋಪಮುಕ್ತ ಎಂದು ಘೋಷಿಸಿದೆ. ಸತ್ಯಾಸತ್ಯತೆ ಅರಿಯಲು ಬಿಜೆಪಿ ಆಧಾರರಹಿತ ಆರೋಪ ಮಾಡಿದ್ದಕ್ಕೆ ಈಗ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದರು.

ಬಿಜೆಪಿಯವರ ಕ್ಷಮಾಪಣೆ ಕೇಳಬೇಕು. ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದರು. ಅನೇಕ ಘಟನೆಗಳು ಈ ದೇಶದಲ್ಲಿ ನಡೆದಿವೆ. ಭಾವನಾತ್ಮಕವಾಗಿ ಬಿಜೆಪಿಯವರು ಅದನ್ನೇ ಮಾಡುತ್ತಿದ್ದಾರೆ. ತನ್ವೀರ್ ಸೇಠ್ ವಿಚಾರದಲ್ಲೂ ಅದನ್ನೇ ಮಾಡ್ತಿದ್ದಾರೆ. ಪಿತೂರಿ, ಸಂಚಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಅದನ್ನ ಬಿಟ್ಟು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಗೌರಿ ಹತ್ಯೆ ಪ್ರಕರಣ ಏನಾಯ್ತು? ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಏನಾಯ್ತು? ತನಿಖೆಗೂ ಮುನ್ನವೇ ಸಿಎಂ ಗೊಂದಲ ಮೂಡಿಸೋದು ಯಾಕೆ? ಜವಾಬ್ದಾರಿಯುತ ವಾಗಿ ನಡೆದುಕೊಳ್ಳಬೇಕು. ಗಣಪತಿ ಸಾವಿನ ವೇಳೆ ಬಿಜೆಪಿಯವರು ಜಾರ್ಜ್ ಅವರಿಗೆ ಮಾನಸಿಕ ಕಿರುಕುಳ ನೀಡಿದ್ರು. ಇನ್ಮೇಲಾದ್ರೂ ಸುಳ್ಳು ಹೇಳೋದನ್ನ ಬಿಜೆಪಿ ಬಿಡಬೇಕು ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا