Urdu   /   English   /   Nawayathi

ಕೆಎಸ್​ಆರ್​ಟಿಸಿ ಕಂಡಕ್ಟರ್ ಸಸ್ಪೆಂಡ್: ಬಸ್ ಚಲಿಸುತ್ತಿದ್ದಾಗಲೇ ವಿದ್ಯಾರ್ಥಿನಿಯ ಹೊರದಬ್ಬಿದ್ದ

share with us

ಬೆಂಗಳೂರು: 20 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಚಲಿಸುತ್ತಿದ್ದ ಬಸ್​ನಿಂದ ವಿದ್ಯಾರ್ಥಿನಿಯನ್ನು ಕಂಡಕ್ಟರ್ ಹೊರಗೆ ತಳ್ಳಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ವಿದ್ಯಾರ್ಥಿನಿ ಮುಖ, ಕೈ-ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಹಲ್ಲುಗಳೂ ಮುರಿದಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಸ್ಸಾರ್ಟಿಸಿ, ನಿರ್ವಾಹಕನನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದೆ. ಬೆಂಗಳೂರು-ಕನಕಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕನಕಪುರ ನಿವಾಸಿ ಭೂಮಿಕಾ (16) ಗಾಯಗೊಂಡಿರುವ ವಿದ್ಯಾರ್ಥಿನಿ. ನಿರ್ವಾಹಕ ಶಿವಶಂಕರ್ ಅಮಾನತುಗೊಂಡಿರುವ ಕಂಡಕ್ಟರ್. ವಿದ್ಯಾರ್ಥಿನಿಯನ್ನು ಶಿವಶಂಕರ್ ಬಸ್​ನಿಂದ ಬಲವಂತವಾಗಿ ಹೊರಗೆ ತಳ್ಳಿದ್ದಾನೆ. ಹೊರಕ್ಕೆ ಬಿದ್ದ ವಿದ್ಯಾರ್ಥಿನಿಯ ಮುಖಕ್ಕೆ ತೀವ್ರವಾಗಿ ಗಾಯವಾಗಿದ್ದು, ಹಲ್ಲುಗಳು ಮುರಿದಿವೆ. ಜತೆಗೆ ಕೈ-ಕಾಲುಗಳು ಹಾಗೂ ದೇಹದ ಇತರೆ ಭಾಗಗಳಲ್ಲಿ ತರಚಿದ ಗಾಯಗಳಾಗಿದೆ. ಕೂಡಲೇ ಸಾರ್ವಜನಿಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಪ್ರಕರಣದ ತನಿಖೆಗೆ ಆದೇಶ: ಪ್ರಕರಣದಲ್ಲಿ ವಿದ್ಯಾರ್ಥಿನಿಯನ್ನು ಬಲವಂತವಾಗಿ ಬಸ್​ನಿಂದ ತಳ್ಳಿದ ಸುದ್ದಿ ತಿಳಿಯುತ್ತಿದ್ದಂತೆ ನಿರ್ವಾಹಕ ಶಿವಶಂಕರ್​ನನ್ನು ಸಾರಿಗೆ ಇಲಾಖೆ ಅಮಾನತು ಮಾಡಿದೆ. ಜತೆಗೆ ಸತ್ಯಾಸತ್ಯತೆ ತಿಳಿದುಕೊಳ್ಳಲು ತನಿಖೆ ಆದೇಶ ಮಾಡಿದ್ದು, ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا